ಮುಂಬೈ: ಖ್ಯಾತ ಬಾಲಿವುಡ್ ನಟ ಮನೋಜ್ ಬಾಜಪಾಯಿ ತಮ್ಮ ಮುಂದಿನ ಸಿನೆಮಾದಲ್ಲಿ ಹೆಚ್ಚಿನ ಸವಾಲಿಗೆ ಒಡ್ಡಿಕೊಂಡಿದ್ದಾರೆ. ಅವರು ಸಲಿಂಗಕಾಮಿಯ ಪಾತ್ರವೊಂದನ್ನ ಪೋಷಿಸಲಿದ್ದಾರೆ. ಹಂಸಲ್ ಮೆಹ್ತಾ ಅವರ ಮುಂದಿನ ಸಿನೆಮಾ 'ಆಲಿಘರ್'ನಲ್ಲಿ ಈ ನಟ ಮೊದಲ ಬಾರಿಗೆ ಸಲಿಂಗಕಾಮಿಯ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ.
ಡಾ. ಶ್ರೀನಿವಾಸ್ ರಾಮಚಂದ್ರ ಸಿರಸ್ ಎಂಬ ಪ್ರೊಫೆಸರ್ ಒಬ್ಬರು ಆಟೋ ಚಾಲಕನೊಬ್ಬನೊಂದಿಗೆ ಲೈಂಗಿಕ ಪ್ರೀತಿಯ ಸಂಬಂಧ ಹೊಂದಿದ್ದರು ಎಂಬ ಆರೋಪದ ಮೇಲೆ ತಮ್ಮ ಕೆಲಸದಿಂದ ವಜಾಗೊಂಡಿದ್ದರು. ಈ ಘಟನೆ ಅವರ ೬೪ನೆಯ ವಯಸ್ಸಿನಲ್ಲಿ ೨೦೧೦ ನೆ ಇಸವಿಯಲ್ಲಿ ನಡೆದಿತ್ತು.
ಸಲಿಂಗಕಾಮ ವಿಷಯವನ್ನು ಪ್ರಮುಖವಾಗಿ ಚರ್ಚಿಸುತ್ತಿರುವ ಪ್ರಥಮ ಬಾಲಿವುಡ್ ಸಿನೆಮಾ ಇದಾಗಲಿದೆ. ಸಾಂವಿಧಾನಿಕ ವಿದಿ ೩೭೭ರ ಅಡಿಯಲ್ಲಿ, ಭಾರತೀಯ ಕಾನೂನಿನ ಪ್ರಕಾರ ಸಲಿಂಗಕಾಮ ಕಾನೂನುಬಾಹಿರ ಎಂದು ಸುಪ್ರೀಮ್ ಕೋರ್ಟ್ ಕಳೆದ ವರ್ಷ ಎತ್ತಿಹಿಡಿದಿತ್ತು. ಈ ಹಿನ್ನಲೆಯಲ್ಲಿ ಈ ಸಿನೆಮಾ ಆಸಕ್ತಿ ಕೆರಳಿಸಿರುವುದಂತೂ ನಿಜ.