ಸಿನಿಮಾದಲ್ಲಿ ಯಾರು ಯಾರಿಗೆ ರೋಲ್ ಮಾಡೆಲ್ ಆಗ್ತಾರೋ ಹೇಳೋಕಾಗಲ್ಲ. ಲೇಟೆಸ್ಟ್ ಉದಾಹರಣೆ ಸನ್ನಿಲಿಯೋನ್‌ಗೆ ಪ್ರಿಯಾಂಕಾ ಛೋಪ್ರಾ ಮಾದರಿಯಾಗಿರೋದು. ಪ್ರಿಯಾಂಕಾ ಛೋಪ್ರಾಳಿಂದ ಸಿಕ್ಕಾಪಟ್ಟೆ ಪ್ರಭಾವಿತಳಾಗಿದ್ದಾಳಂತೆ ಸನ್ನಿ. ಅವಳ ಫೇವರೆಟ್ ನಟಿಯ ಬಗ್ಗೆ ಅತಿ ಅನಿಸೋಷ್ಟು ಹೊಗಳಿರುವ ಸನ್ನಿ ಪ್ರಕಾರ ಪ್ರಿಯಾಂಕಾಳಿಗೆ ಗೊತ್ತಿಲ್ಲದ ವಿದ್ಯೆಯೇ ಇಲ್ಲವಂತೆ.
'ಅಮೆರಿಕಾದಲ್ಲೂ ಪ್ರಿಯಾಂಕಾ ಛೋಪ್ರಾಳ ಹೆಸರು ಜನಪ್ರಿಯ. ಬೇರೆ ದೇಶದಲ್ಲಿ ನಟಿಯೊಬ್ಬಳು ಹೆಸರು ಮಾಡುವುದು ತಮಾಷೆಯಲ್ಲ ಅಂದಿರುವ ಮಾಜಿ ಪೋರ್ನ್ ಸ್ಟಾರ್ ನನ್ನಂಥ ನಟಿ ಜಗತ್ತಿನಾದ್ಯಂತ ಪರಿಚಯ ಇದ್ದರೂ ಅದನ್ನು ಪ್ರಿಯಾಂಕಾಳ ಜನಪ್ರಿಯತೆಗೆ ಹೋಲಿಸಲಾಗುವುದಿಲ್ಲ.
ಆಕೆ ನಟಿಸಬಲ್ಲಳು ಹಾಡಬಲ್ಲಳು, ಫೈಟ್ ಮಾಡಬಲ್ಲಳು. ಅವಳಿಂದ ನಾನು ಕಲಿಯೋದು ತುಂಬಾ ಇದೆ' ಅಂತಾಳೆ. ಪ್ರಿಯಾಂಕಾ ಹೊರತಾಗಿ ವಿದ್ಯಾಬಾಲನ್ ಮತ್ತು ಕಂಗನಾ ನಟನೆಯ ಬಗ್ಗೆ ಸನ್ನಿಗೆ ಅಪಾರ ಗೌರವವಂತೆ. 'ಬಾಲಿವುಡ್ ನನಗೆ ಈ ರೀತಿಯ ಪುನರ್ಜನ್ಮ ಕೊಟ್ಟೀತೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ' ಎಂದಿರುವ ಸನ್ನಿ ಇನ್ಮುಂದೆ ನೀಲಿ ಚಿತ್ರಗಳಲ್ಲಿ ನಟಿಸುವ ಸೀನೇ ಇಲ್ಲವಂತೆ. ಈ ಡೈಲಾಗ್ ಕೇಳಿದ ಪಡ್ಡೆಗಳು ಇಟ್ಸ್ ಓಕೆ ನಮಗೆ ಹಳೇ ಚಿತ್ರಗಳೇ ಸಾಕು ಅಂತಿದ್ದಾರೆ!