ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಐದು ವರ್ಷಗಳ ವಿರಾಮದ ನಂತರ 'ಜಸ್ಬಾ' ಸಿನೆಮಾದ ಮೂಲಕ ಸಿನೆಮಾ ರಂಗಕ್ಕೆ ಹಿಂದಿರುಗಿದ್ದರೆ.
ಕಾನ್ ಸಿನೆಮೋತ್ಸವದಲ್ಲಿ ಐಶ್ವರ್ಯ ಅವರೇ ಈ ಸಿನೆಮಾದ ಭಿತ್ತಿಚಿತ್ರ ಬಿಡುಗಡೆ ಮಾಡಿದ್ದರು.
ಈಗ ನಟಿಯ ಫೇಸ್ಭುಕ್ ಅಭಿಮಾನಿಗಳ ಪುಟದಲ್ಲಿ ಸಿನೆಮಾದ ಸೆಟ್ ಗಳಿಂದ ಹೊಸ ಚಿತ್ರಗಳು ಲಭ್ಯವಾಗಿವೆ. ಗಂಭೀರ ಮುಖ ಹೊತ್ತಿರುವ ಐಶ್ವರ್ಯ ರೈ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ.
ಸಂಜಯ್ ಗುಪ್ತಾ ನಿರ್ದೇಶನದ ಈ ಚಿತ್ರ ಅಕ್ಟೋಬರ್ ೯ ೨೦೧೫ಕ್ಕೆ ಬಿಡುಗಡೆಯಾಗಲಿದೆ. ಐಶ್ವರ್ಯ ಅಲ್ಲದೆ ಇರ್ಫಾನ್ ಖಾನ್ ಮತ್ತು ಶಬನ ಆಜ್ಮಿ ಕೂಡ ಈ ಸಿನೆಮಾದಲ್ಲಿ ನಟಿಸಿದ್ದಾರೆ.