ನವದೆಹಲಿ: ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ ಈದ್ ಮಿಲಾದ್ ಎಂದರೆ ಕುಟುಂಬದವರೊಡನೆ ಕಳೆಯುವ ಸಂತಸದ ಕ್ಷಣವಂತೆ. ಹಾಗಂತ ಸ್ವತಹ ಆಮೀರ್ ಖಾನೇ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಮೀರ್ ಖಾನ್, ಈದ್ ಅಂದರೆ ನನಗೆ ತುಂಬಾ ಹತ್ತಿರವಾದವರ ಜತೆ ಸಂತೋಷದಿಂದ ಕಳೆಯಲು ಇರುವ ಸಮಯ ಎಂದು ಹೇಳಿದ್ದಾರೆ. ಹಬ್ಬದ ಸಡಗರದ ಜತೆ ಅವರು ಸಲ್ಮಾನ್ ಖಾನ್ ನ ಬಜರಂಗಿ ಬಾಯಿಜಾನ್ ಸಿನೆಮಾವನ್ನು ಕೂಡ ವೀಕ್ಷಿಸಲಿದ್ದಾರಂತೆ.
ಸಲ್ಮಾನ್ ಖಾನ್ ನ ಬಜರಂಗಿ ಬಾಯಿಜಾನ್ ಚಿತ್ರ ನಿನ್ನೆ(ಶುಕ್ರವಾರ) ತೆರೆಕಂಡಿದ್ದು, ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಈ ಚಿತ್ರದ ಫಸ್ಟ್ ಲುಕ್ ನ್ನು ಮೊದಲು ಶಾರೂಕ್ ಖಾನ್, ಆಮೇಲೆ ಆಮೀರ್ ಖಾನ್ ಬಿಡುಗಡೆಗೊಳಿಸಿದ್ದರು.