ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ದಿಲ್‌ವಾಲೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫೋಸ್ಟರ್ ನಲ್ಲಿ ಎವರ್ ಗ್ರೀನ್ ಜೋಡಿಗಳಳೊಂದಾದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಹಾಗೂ ಕಾಜೋಲ್ ಮ್ಯಾಜಿಕ್ ಮಾಡಿದ್ದಾರೆ.
ಶಾರುಖ್ ಖಾನ್ ಹಾಗೂ ಕಾಜೋಲ್ ಚಿತ್ರಗಳು ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿವೆ. ಇವರ ಅಭಿನಯದ ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರ ಲವರ್ಸ್ ಗಳ ಹಾರ್ಟ್ ಫೇವರಿಟ್ ಆಗಿದೆ. ಬಾಜಿಗರ್, ‘ಕರನ್ ಅರ್ಜುನ್’, ‘ಕುಚ್ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’ ಮುಂತಾದ ಸಿನಿಮಾದಲ್ಲಿ ಈ ಜೋಡಿ ನಟಿಸಿ ಸಿನಿಪ್ರಿಯರ ಮನ ಗೆದ್ದಿತ್ತು.
ರೋಹಿತ್ ಶೆಟ್ಟಿಯ ಹಿಂದಿನ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ಭಾರಿ ಸದ್ದು ಮಾಡಿತ್ತು. ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ದಿಲ್‌ವಾಲೆ ಚಿತ್ರದ ಬಗ್ಗೆ ಬಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳು ಮೂಡಿಸಿವೆ.