ನವದೆಹಲಿ: ಈ ವರ್ಷ ತಮಗೆ ಭಾರಿ ಯಶಸ್ಸು ನೀಡಿದ 'ಪಿಕು' ಚಲನಚಿತ್ರದಲ್ಲಿ ಧರಿಸಿದ್ದ ಒಲೆಗಳನ್ನು ಸ್ಮರಣಾರ್ಥವಾಗಿ ತಮ್ಮಲ್ಲಿಯೇ ಉಳಿಸಿಕೊಳ್ಳುವುದಕ್ಕೆ ನಟಿ ದೀಪಿಕಾ ಪಡುಕೋಣೆ ವಿಶೇಷ ಮನವಿಮಾಡಿದ್ದಾರೆ.
"'ಪಿಕು' ನನಗೆ ಬಹಳ ವಿಶೇಷ ಸಿನೆಮಾ. ಆದುದರಿಂದ ಮುಂದಿನ ವರ್ಷಗಳಲ್ಲೂ ಇದನ್ನು ನೆನಪಿಸಿಕೊಳ್ಳಲಿ ಯಾವುದಾದರೂ ವಸ್ತುವನ್ನು ನನ್ನಲ್ಲಿ ಉಳಿಸಿಕೊಳ್ಳಬೇಕಿತ್ತು" ಎಂದು ದೀಪಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನಾರೋಗ್ಯ ಪೀಡಿತ ತಂದೆ (ಅಮಿತಾಬ್ ಬಚ್ಚನ್) ಮತ್ತು ಮಗಳ(ದೀಪಿಕಾ) ಕಥೆ ಹೊಂದಿರುವ ಪಿಕು ಸಿನೆಮಾವನ್ನು ಶೂಜಿತ್ ಸರ್ಕಾರ್ ನಿರ್ದೇಶಿಸಿದ್ದರು. ಈ ಸಿನೆಮಾ ವೀಕ್ಷಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಪ್ರಶಂಸಿಸಿದ್ದರು.
ಇರ್ಫಾನ್ ಖಾನ್ ಕೂಡ ಸಿನೆಮಾದಲ್ಲಿ ನಟಿಸಿದ್ದಾರೆ.