ನಟಿ ಪ್ರೀತಿ ಜಿಂಟಾ (ಸಂಗ್ರಹ ಚಿತ್ರ) 
ಬಾಲಿವುಡ್

ಮಹಿಳಾ ಪತ್ರಕರ್ತೆ ವಿರುದ್ಧ ಪ್ರೀತಿ ಕೋಪ..!

ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಹಿಳಾ ಪತ್ರಕರ್ತೆ ವಿರುದ್ಧ ಕೋಪಗೊಂಡಿದ್ದು, ಖಾಸಗಿ ವಿಚಾರಗಳನ್ನು ತಿಳಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಹಿಳಾ ಪತ್ರಕರ್ತೆ ವಿರುದ್ಧ ಕೋಪಗೊಂಡಿದ್ದು, ಖಾಸಗಿ ವಿಚಾರಗಳನ್ನು ತಿಳಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಮುಂಬರುವ ಐಪಿಎಲ್ ಸರಣಿಗಾಗಿ ಮುಂಬೈನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಹೊಸ ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಪತ್ರಕರ್ತೆಯ ವಿರುದ್ಧ ಕೆಂಡಕಾರಿದರು. ನೆಸ್ ವಾಡಿಯಾ ಮತ್ತು ಪ್ರೀತಿ ಜಿಂಟಾ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕರಾಗಿದ್ದು, ಈಗ ಇಬ್ಬರ ನಡುವೆ ಜಗಳವಾಗಿದೆ.

ಈ ವಿಚಾರಕ್ಕೆ ಸಂಬಂಧಪಟ್ಟ ಪ್ರಶ್ನೆಯನ್ನು ಪತ್ರಕರ್ತೆ ಕೇಳಿದಾಗ ಪ್ರೀತಿ ಕೆಂಡಾ ಮಂಡಲರಾದರು. ಓರ್ವ ಮಹಿಳಾ ಪತ್ರಕರ್ತೆಯಾಗಿ ಎಲ್ಲಿ ಯಾವ ವಿಚಾರವನ್ನು ಕೇಳಬೇಕು ಎಂಬ ಅರಿವು ನಿಮಗಿರಬೇಕು ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಪ್ರೀತಿ ಜಿಂಟಾ, ಕ್ರೀಡಾಂಗಣದ ಹೊರಗಿನ ವಿಚಾರಗಳು ಯಾವುದೇ ಕಾರಣಕ್ಕೂ ಆಟದ ಮೇಲೆ ಪರಿಣಾಮ ಬೀರಬಾರದು. ಈ ಹಿಂದೆ ಏನಾಗಿತ್ತೋ ಅದು ಗತಿಸಿ ಹೋಗಿದೆ. ಮತ್ತೆ ಅದನ್ನು ಕೆಣಕುವ ಅಗತ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ. ನಾನು ಕೂಡ ನಿಮ್ಮ ಖಾಸಗಿ ವಿಚಾರಗಳನ್ನು ಪ್ರಶ್ನಿಸಬಹುದು. ಆದರೆ ಅದು ಬೇಕಿಲ್ಲ. ನೀವು ಕೇಳಿದ ವಿಚಾರ ಸರಿ ಇದೆ.

ಆದರೆ ಕೇಳಿದ ರೀತಿ ತಪ್ಪು. ನಾವು ಯಾರನ್ನೇ ಏನೇ ಕೇಳಿದರೂ ಅದನ್ನು ಹೇಗೆ ಪ್ರಶ್ನಿಸಬೇಕು ಎಂಬುದನ್ನು ತಳಿದಿರಬೇಕು. ಮುಖ್ಯವಾಗಿ ಪತ್ರಕರ್ತರು ಈ ಬಗ್ಗೆ ಎಚ್ಚರದಿಂದರಬೇಕು ಎಂದು ಪ್ರೀತಿ ಜಿಂಟಾ ಹೇಳಿದರು. ಇದೇ ವೇಳೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳನ್ನು ನನ್ನ ಬಳಿ ತರಬೇಡಿ ಎಂದೂ ಪ್ರೀತಿ ಹೇಳಿದರು.

ಇದೇ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಆಟಗಾರ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಕೂಡ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

'ಹನೂರು ಎನ್‌ಕೌಂಟರ್'ಗೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆ ಜಾಲ ಪತ್ತೆ!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ; ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ!

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!