ನಟ ಆದಿತ್ಯಾ ಪಾಂಚೋಲಿ (ಸಂಗ್ರಹ ಚಿತ್ರ) 
ಬಾಲಿವುಡ್

ಕ್ಲಬ್‌ನಲ್ಲಿ ಕುಡಿದು ಗಲಾಟೆ ಮಾಡಿದ್ದ ನಟ ಪಾಂಚೋಲಿ ಬಂಧನ, ಬಿಡುಗಡೆ

ನೈಟ್ ಕ್ಲಬ್ ನಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಾಲಿವುಡ್ ನಟ ಆದಿತ್ಯಾ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದಾರೆ...

ಮುಂಬೈ: ನೈಟ್ ಕ್ಲಬ್ ನಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಾಲಿವುಡ್ ನಟ ಆದಿತ್ಯಾ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಖ್ಯಾತ ನೈಟ್‌ಕ್ಲಬ್‌ ಗೆ ಆಗಮಿಸಿದ್ದ ನಟ ಆದಿತ್ಯಾ ಪಾಂಚೋಲಿ ಡಿ.ಜೆ.ಆಲ್ಬಂ ಹಾಡುಗಳಿಗೆ ಸಂಬಂಧಿಸಿದಂತೆ ತಗಾದೆ ತೆಗೆದಿದ್ದು, ಕುಡಿದು ಕ್ಲಬ್ ನ ಸಿಬ್ಬಂದಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ಕ್ಲಬ್ ನ ಕೆಲ ಸಿಬ್ಬಂದಿಗಳನ್ನು ಅವರು ಥಳಿಸಿದ್ದು, ಹೊಟೆಲ್ ಮ್ಯಾನೇಜರ್ ಸಂಧಾನಕ್ಕೂ ಪಾಂಚೋಲಿ ಜಗ್ಗಲಿಲ್ಲ. ಹೀಗಾಗಿ ಅಂತಿಮವಾಗಿ ಪೊಲೀಸರಲ್ಲಿ ದೂರು ನೀಡಿದ್ದು, ಪ್ರಸ್ತು ಪೊಲೀಸರು ನಟ ಆದಿತ್ಯಾ ಪಾಂಚೋಲಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಪ್ರಸ್ತುತ ನಟ ಪಾಂಚೋಲಿಯನ್ನು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಘಟನೆ ವಿವರ
ಕ್ಲಬ್‌ನಲ್ಲಿ ಡಿಜೆ ರಿಮಿಕ್ಸ್ ಹಾಡುಗಳನ್ನು ಪ್ಲೇ ಮಾಡಲಾಗುತ್ತಿದ್ದ ಸಂದರ್ಭ ಪಾಂಚೋಲಿ ಕ್ಯಾತೆ ತೆಗೆದಿದ್ದು, ಡಿಜೆ ಹಾಡುಗಳನ್ನು ನಿಲ್ಲಿಸಿ ಇಂಗ್ಲಿಷ್ ಹಾಡುಗಳನ್ನು ಹಾಕುವಂತೆ ಪಾಂಚೋಲಿ ಮ್ಯಾನೇಜರ್ ಮೇಲೆ ಗಲಾಟೆ ಮಾಡಿದ್ದಾರೆ. ಈ ವೇಳೆ ಕಂಠಮಟ್ಟ ಕುಡಿದಿದ್ದ ಪಾಂಚೋಲಿ ಮ್ಯಾನೇಜರ್ ನಿರಾಕರಣೆಯೊಂದಿಗೆ ಕೆರಳಿ ಅಲ್ಲಿನ ಸಿಬ್ಬಂಧಿಗಳನ್ನೇ ತೀವ್ರವಾಗಿ ಥಳಿಸಿದ್ದಾರೆ. ಪಾಂಚೋಲಿಯನ್ನು ಸಮಾಧಾನ ಪಡಿಸಿ ಹೊರ ಕಳಿಸಲು ಹೊಟೆಲ್ ಕೆಲಸಗಾರರು ಮಾಡಿದ ಪ್ರಯತ್ನಗಳಲ್ಲಾ ವಿಫಲವಾದವು. ಈ ವೇಳೆ ಒಬ್ಬ ಕೆಲಸಗಾರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ನಡುವೆ ಎಲ್ಲರೂ ಸೇರಿ ಪಾಂಚೋಲಿಯನ್ನು ಸಮೀಪದ ಭಾಭಾ ಆಸ್ಪತ್ರೆಗೆ ಅವನನ್ನು ಕರೆದೊಯ್ದು ಮದ್ಯಪಾನ ಮಾಡಿರುವ ಬಗ್ಗೆ ಸರ್ಟಿಫಿಕೇಟ್ ಮಾಡಿಸಿದರು. ನಂತರ ಆತನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟ ಪಾಂಚೋಲಿ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT