ಈ ರೀತಿಯ ಬಾಂಬ್‍ಗಳನ್ನು ಸಿಡಿಸುವುದರಲ್ಲಿ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಖತ್ ಎಕ್ಸ್ ಪರ್ಟ್. ವಿರಾಟ್ ಕೊಹ್ಲಿಯನ್ನು ತಾನು ಮನಸಾರೆ ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಬಾಲಿವುಡ್‍ನಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ ರಾಖಿ.
ಅನುಷ್ಕಾಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪ್ರೇಮ ಬಾಂಧವ್ಯಕ್ಕೆ ರಾಖಿ ಹುಳಿ ಹಿಂಡುವ ಪ್ರಯತ್ನ ಮಾಡಿದ್ದಾರೆ ಎಂಬುದು ಬಾಲಿವುಡ್ ಅಂಗಳದಲ್ಲಿ ಮಾತಾಡುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಜತೆ ಮಾತನಾಡಿ, `ಅನುಷ್ಕಾ ಎಂದೂ ಕೊಹ್ಲಿಯನ್ನು ಇಷ್ಟಪಡ್ತೀನಿ ಎಂದು ಬಹಿರಂಗವಾಗಿ ಹೇಳಿಲ್ಲ. ಆದರೆ ನಾನಂತೂ ಕೊಹ್ಲಿಯನ್ನು ತುಂಬಾನೇ ಇಷ್ಟಪಡ್ತೀನಿ. ಹಾಗಾಗಿ ನಾನು ಮನಸಾರೆ ಕೊಹ್ಲಿಯನ್ನು ಪ್ರೀತಿಸು ತ್ತಿದ್ದೇನೆ' ಎಂದು ಬಹಿರಂಗವಾಗಿ ಹೇಳಿದ್ದಾಳೆ.
ಆದರೆ ರಾಖಿ ಸಾವಂತ್ ಅವರ ಮಾತಿಗೆ ಅತ್ತ ಅನುಷ್ಕಾ ಆಗಲಿ, ವಿರಾಟ್ ಕೊಹ್ಲಿ ಆಗಲಿ ಕ್ಯಾರೆ ಎಂದಿಲ್ಲ. `ತನ್ನ ಹಾಗೂ ಅನುಷ್ಕಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಕುತೂಹಲ ತೋರಿಸುವ ಅವಶ್ಯಕತೆ ಇಲ್ಲ' ಎಂದ ವಿರಾಟ್, ರಾಖಿ ಬಾಂಬ್‍ನ ಠುಸ್ ಗೊಳಿಸಿದ್ದಾನೆ.