ಚೆನ್ನೈ: ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ `ಉತ್ತಮ ವಿಲನ್' ಕೊನೆಗೂ ತೆರೆಕಂಡಿದೆ. ಕಳೆದೊಂದು ತಿಂಗಳಿಂದ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದ್ದ ಬಹುಕೋಟಿ ವೆಚ್ಚದ ಈ ಚಿತ್ರ ಶುಕ್ರವಾರ ಬಿಡುಗಡೆಯಾಗ ಬೇಕಿತ್ತು.ಆದರೆ ಫೈನಾನ್ಷಿಯರ್ ಮತ್ತು ನಿರ್ಮಾಪಕರ ಆರ್ಥಿಕ ವಿವಾದದಿಂದಾಗಿ ಪ್ರದರ್ಶನ ರದ್ದಾಗಿತ್ತು.
ಆದರೆ ತಮಿಳು ನಿರ್ಮಾಪಕರ ಪಕರ ಸಂಘ, ದಕ್ಷಿಣ ಭಾರತ ಕಲಾವಿದರ ಸಂಘ ಹಾಗೂ ನಿರ್ದೇಶಕರ ಸಂಘ ನಡೆಸಿದ 25ಗಂಟೆಗಳ ನಿರಂತರ ಮಾತುಕತೆ ಫಲಪ್ರದವಾದ ನಂತರ ಪ್ರದರ್ಶನಕ್ಕೆ ಅನುಮತಿ ದೊರೆತಿದೆ. 2 ವರ್ಷಗಳ ನಂತರ ಕಮಲ್ ಹಾಸನ್ ಸಿನಿಮಾ ತೆರೆಕಾಣುತ್ತಿದ್ದು, ಶುಕ್ರವಾರ ನಿರಾಶರಾಗಿದ್ದ ಅಭಿಮಾನಿಗಳು ಈಗ ಸಮಾಧಾನಗೊಂಡಿದ್ದಾರೆ.
ಕಮಲ್‍ರ ಹಿಂದಿ ನ ಚಿತ್ರ ವಿಶ್ವರೂಪಂ ಮುಸ್ಲಿಂ ಸಂಘಟನೆಗಳ ಕ್ರೋಧಕ್ಕೀಡಾಗಿದ್ದರೆ, ಈ ಚಿತ್ರ ವಿಶ್ವ ಹಿಂದೂ ಪರಿಷತ್‍ನವರ ಕಣ್ಣು ಕೆಂಪಗಾಗಿಸಿತ್ತು. 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಆಗುತ್ತಿರುವ ಅಡೆತಡೆಗಳಿಗೆ ರಾಜಕೀಯ ಷಡ್ಯಂತ್ರ ಕಾರಣ ಎಂಬ ಮಾತನ್ನು ಸಂಧಾನ ನಡೆಸಿರುವ ಎಸ್‍ಐಎಎ ಅಧ್ಯಕ್ಷ ಶರತ್‍ಕುಮಾರ್ ಅಲ್ಲಗಳೆದಿದ್ದಾರೆ.