ಮುಂಬೈ: ೨೦೦೨ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿ ಸಲ್ಮಾನ್ ಖಾನ್ ಅವರನ್ನು ತಪ್ಪಿತಸ್ಥ ಎಂದು ದೂರು ನೀಡಿ ಐದು ವರ್ಷಗಳ ಸಜೆ ನೀಡಿದ ಸೆಷನ್ ನ್ಯಾಯಾಲದ ತೀರ್ಪಿಗೆ ಬಾಲಿವುಡ್ಡಿನ ಹಲವು ನಟ ನಟಿ ಹಾಗು ಮತ್ತಿತರು ಅಸಮಧಾನ ತೋರಿದ್ದು, ಸಂತ್ರಸ್ತರಿಗೆ ಅವಮಾನವಾಗುವ ಟ್ವೀಟ್ ಗಳ ಮಳೆಗಳನ್ನೇ ಸುರಿಸಿದ್ದಾರೆ. ಸಂತ್ರಸ್ತರ ಬಗ್ಗೆ ಒಂದು ಚೂರೂ ಕಾಳಜಿಯನ್ನು ತೋರಿಸದ ಬಾಲಿವುಡ್ ಮಂದಿ, ಕೆಲವೊಮ್ಮೆ ಅಸಭ್ಯವಾಗಿ ಕೂಡ ಟ್ವೀಟ್ ಮಾಡಿದ್ದಾರೆ. ಅಂತಹವರಲ್ಲಿ ಒಬ್ಬರು ಗಾಯಕ ಅಭಿಜಿತ್ ಭಟ್ಟಾಚಾರ್ಯ.
ಇವರು ಟ್ವೀಟ್ ಮಾಡಿ "ರೋಡುಗಳಿರುವುದು ಕಾರುಗಳಿಗೆ ಮತ್ತು ನಾಯಿಗಳಿಗೆ. ಜನರು ಮಲಗಲು ಅಲ್ಲ. ಸಲ್ಮಾನ್ ಖಾನ್ ಅವರದ್ದು ಏನೂ ತಪ್ಪಿಲ್ಲ" ಎಂದು ಟ್ವೀಟ್ ಮಾಡಿ ಸಂತ್ರಸ್ತರನ್ನು ನಾಯಿಗಳಿಗೆ ಹೋಲಿಸಿದ್ದಾರೆ. ಇದರ ವಿರುದ್ಧ ಸುಮಾರು ಜನ ಟ್ವೀಟ್ ಮಾಡಿದ್ದರೂ ಕೂಡ ಈ ಗಾಯಕ ತನ್ನ ನಿಲುವನ್ನು ಬದಲಿಸಿಕೊಳ್ಳಲು ಒಪ್ಪಿಕೊಂಡಿಲ್ಲ.