ಮುಂಬೈ: ೨೦೧೧ರಿಂದ ನಿರಂತರವಾಗಿ ಕಾನ್ ಅಂತರಾಷ್ಟ್ರೀಯ ಸಿನೆಮೋತ್ಸವದ ಕೆಂಪು ಹಾಸಿನ ಮೇಲೆ ನಡೆಯುತ್ತಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ಈ ಬಾರಿಯೂ ಐದನೇ ಬಾರಿ ಉತ್ಸವದಲ್ಲಿ ಮಿನುಗಲು ಸಿದ್ಧತೆ ನಡೆಸಿದ್ದಾರೆ.
ಬ್ರಾಂಡ್ ರಾಯಭಾರಿಯಾಗಿ ಮೇ ೧೫ ರ ಫ್ರಾನ್ಸ್ ನ ಈ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರುವುದರಿಂದ ಎಲ್ಲವೂ ಸುಸೂತ್ರವಾಗಿರಲು 'ಲಾರಿಯಲ್ ಪ್ಯಾರಿಸ್' ಸಿದ್ಧತೆಗೆ ಅನುವಾಗುತ್ತಿದೆ.
ಪ್ರತಿ ಕೆಂಪು ಹಾಸಿನ ನಡಿಗೆಗೂ ಮುಂಚೆ ತನ್ನ ಉಡುಗೆ ತೊಡುಗೆಗಳ ಬಗ್ಗೆ ಪ್ರಾಮುಖ್ಯತೆ ನೀಡುತ್ತಿದ್ದ ಸೋನಮ್ ಈ ಬಾರಿ ವ್ಯಾಯಾಮ, ಆಯೋಗ್ಯಕರ ಆಹಾರದೆಡೆಗೂ ಗಮನ ನೀಡಿದ್ದಾರೆ.
೬೮ನೆ ಕಾನ್ ಸಿನೆಮೋತ್ಸವದಲ್ಲಿ ಮೇ ೧೬ ಮತ್ತು ಮೇ ೧೮ ರಂದು ಸೋನಮ್ ಲಾರಿಯಲ್ ಬ್ರಾಂಡ್ ಪ್ರತಿನಿಧಿಸಲಿದ್ದಾರೆ.
ಕಾನ್ ಕೆಂಪು ಹಾಸಿನ ಮೇಲೆ ನಡೆಯುವ ಇತರ ಭಾರತೀಯ ಬ್ರಾಂಡ್ ರಾಯಭಾರಿಗಳು ಐಶ್ವರ್ಯ ರೈ ಮತ್ತು ಕತ್ರಿನಾ ಕೈಫ್.