ಬಾಲಿವುಡ್

ಅಶ್ಲೀಲ ಚಿತ್ರ: ನಟಿ ಸನ್ನಿ ಲಿಯೋನ್ ವಿರುದ್ಧ ಮಹಿಳೆ ದೂರು

Srinivasamurthy VN

ಮುಂಬೈ: ಅಶ್ಲೀಲ ಚಿತ್ರ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಂಬೈ ಮೂಲದ ಮಹಿಳೆಯೊಬ್ಬರು ಬಾಲಿವುಡ್ ನಟಿ ಸನ್ನಿಲಿಯೋನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ಧ ಅಶ್ಲೀಲ ಚಿತ್ರ ಪ್ರಕಟ ಪ್ರಕರಣ ದಾಖಲಾಗಿದ್ದು, ಮುಂಬೈ ಮೂಲದ ಮಹಿಳೆಯೊಬ್ಬರು ಈ ದೂರು ದಾಖಲಿಸಿದ್ದಾರೆ. ಅಂತಾರ್ಜಾಲದಲ್ಲಿ ನಟಿ ಸನ್ನಿ ಲಿಯೋನ್ ಅವರ ವೆಬ್ ಸೈಟಿನಲ್ಲಿ ಲೈಂಗಿಕತೆ ಪ್ರಚೋದಿಸುವ ಚಿತ್ರಗಳಿದ್ದು, ಜನರ ಮತ್ತು ಮಕ್ಕಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಪ್ರಸ್ತುತ ಮಹಿಳೆಯಿಂದ ದೂರು ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು, ನಟಿ ಸನ್ನಿ ಲಿಯೋನ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ "ಅಶ್ಲೀಲ ಚಿತ್ರ ಪ್ರಕಟ" ಮತ್ತು ಮಹಿಳಾ ಕಾಯ್ದೆಯ ಅಡಿಯಲ್ಲಿ "ಅಸಭ್ಯ ಪ್ರಾತಿನಿಧ್ಯತೆ" ಪ್ರಕರಣದಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ಮುಂಬೈ ನ ಥಾಣೆ ಸೈಬರ್ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT