ಪಣಜಿ: ಸೆನ್ಸಾರ್ ಬೋರ್ಡ್ ಕೇಂದ್ರ ಸರ್ಕಾರದ ಮುಖವಾಣಿಯಲ್ಲ ಎಂದು ವಾರ್ತಾ ಮತ್ತು ಪ್ರಸಾರ ಖಾತೆಯ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಜೇಮ್ಸ್ ಬಾಂಡ್ ಸಿನಿಮಾ ಸ್ಪೆಕ್ಟರ್ ನಲ್ಲಿ ಕೆಲವೊಂದು ಮಾತುಗಳಿಗೆ ಮತ್ತು ಕಿಸ್ಸಿಂಗ್ ದೃಶ್ಯಗಳಿಗೆ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪಹಲಾಜ್ ನಿಹಲಾನಿ ಕತ್ತರಿ ಹಾಕಿದ್ದ ಕಾರಣ ಸಿನಿಮಾ ಪ್ರಿಯರು ಗದ್ದಲವೆಬ್ಬಿಸಿದ್ದರು. ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕತಾಣದಲ್ಲಿ ಈ ಕತ್ತರಿ ಪ್ರಯೋಗದ ಬಗ್ಗೆ ಸೆನ್ಸಾರ್ ಮಂಡಳಿ ವಿರುದ್ಧ ಟೀಕಾ ಪ್ರಹಾರಗಳೂ ನಡೆದಿದ್ದವು.
ಅಂತಾರಾಷ್ಟ್ರೀಯ ಸಿನಿಮಾ ಫೆಸ್ಟಿವಲ್ ನಲ್ಲಿ ಇಂಡಿಯನ್ ಪನೋರಮಾ ವಿಭಾಗದ ಉದ್ಘಾಟನೆ ಮಾಡಿ ಮಾತನಾಡಿದ ರಾಥೋಡ್ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಸಿನಿಮಾರಂಗದೊಂದಿಗೆ ಮಾತನಾಡಿದ್ದೇನೆ. ಸೆನ್ಸಾರ್ ಮಂಡಳಿ ಕೇಂದ್ರ ಸರ್ಕಾರದ ಮುಖವಾಣಿಯಲ್ಲ. ಆದಾಗ್ಯೂ, ನಾವು ನಮ್ಮ ನಿರ್ಧಾರದಲ್ಲಿ ಅಚಲರಾಗಿದ್ದೇವೆ ಎಂದಿದ್ದಾರೆ.