ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಬಜರಂಗಿ ಭಾಯಿಜಾನ್ ಹಣ ಗಳಿಕೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಆದರೆ ಈಗ ಭಾಯಿಜಾನ್ ಕಾನೂನಿ ಕಟಕಟೆಯಲ್ಲಿ ನಿಂತಿದ್ದಾನೆ.
ಬಜರಂಗಿ ಭಾಯಿಜಾನ್ ಕಥೆಯನ್ನು ಕೃತಿಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ, ಮಾಹಿಮ್ ಜೋಶಿ ಬಾಂಬೆ ಹೈಕೋರ್ಟ್ನಲ್ಲಿ ದಾವೆ ಹೂಡಿ, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಿಚಾರಣೆ ನಡೆಸಿದ ನ್ಯಾಯಾಧೀಶ ಗೌತಮ್ ಪಟೇಲ್ ಅವರು, ಬಜರಂಗಿ ಭಾಯಿಜಾನ್ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿದ್ದಾರೆ. ಆದರೆ ವಿಚಾರಣೆ ಮುಗಿಯುವವರೆಗೆ ಚಿತ್ರದ ಆದಾಯವನ್ನು ಪ್ರತ್ಯೇಕವಾಗಿಟ್ಟುಕೊಂಡಿರಬೇಕು ಎಂದು ಚಿತ್ರದ ನಿರ್ಮಾಪಕರಿಗೆ ಸೂಚಿಸಿದ್ದಾರೆ.
ಚಿತ್ರ ಕಥೆಗೆ ಕ್ರೆಡಿಟ್ ಕೊಡಬೇಕು ಮತ್ತು ತಮ್ಮ ಕಥೆಯನ್ನು ಬಳಸಿಕೊಂಡಿದ್ದಕ್ಕೆ ಸೂಕ್ತ ಪರಿಹಾರ ಕೋರಿ ಮಾಹಿಮ್ ಜೋಶಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಚಿತ್ರದ ಕಥೆಯನ್ನು ನಾನು ಬರೆದಿದ್ದು, ಇದನ್ನು ಚಿತ್ರ ಲೇಖಕರ ಸಂಘದಲ್ಲಿ ನೋಂದಣಿ ಮಾಡಿಸಲಾಗಿದೆ. ಆದರೆ ಚಿತ್ರ ನೋಡಿದ ನಂತರ ಕೃತಿಚೌರ್ಯ ಮಾಡಿದ್ದನ್ನು ನೋಡಿ ನನಗೆ ಅಚ್ಚರಿಯಾಯಿತು ಎಂದು ಲೇಖರು ಹೇಳಿದ್ದಾರೆ.