ಕರೀನಾ ಕಪೂರ್ (ಸಂಗ್ರಹ ಚಿತ್ರ) 
ಬಾಲಿವುಡ್

ಪಾಕ್ ಚಿತ್ರದಲಿ ಕರೀನಾ!

ಇಂಡಿಯನ್ ಡೈರೆಕ್ಟರ್, ಪಾಕ್ ಹೀರೋಯಿನ್- ಇದು ಇಲ್ಲಿಯ ತನಕ ಆಗಿದ್ದು. ಆದರೆ, ಈಗಾಗ್ತಿರೋದು ಪಾಕ್ ಡೈರೆಕ್ಟರ್ರು, ಇಂಡಿಯಾದ ಹೀರೋಯಿನ್ನು..!

ಇಂಡಿಯನ್ ಡೈರೆಕ್ಟರ್, ಪಾಕ್ ಹೀರೋಯಿನ್- ಇದು ಇಲ್ಲಿಯ ತನಕ ಆಗಿದ್ದು. ಆದರೆ, ಈಗಾಗ್ತಿರೋದು ಪಾಕ್ ಡೈರೆಕ್ಟರ್ರು, ಇಂಡಿಯಾದ ಹೀರೋಯಿನ್ನು !

ಹೌದು . ಕರೀನಾ ಕಪೂರ್ ಇದಕ್ಕೆ ಮೇಲ್ಪಂಕ್ತಿ ಹಾಕುತ್ತಿದ್ದಾರೆ. ಪಾಕಿಸ್ತಾದ  ನಿರ್ದೇಶಕ ಶೊಯೇಬ್ ಮನ್ಸೂರ್‌ನ ಚಿತ್ರದಲ್ಲಿ ಕರೀನಾ ಕಪೂರ್ ನಾಯಕಿ ಆಗಿ ನಟಿಸುತ್ತಿದ್ದಾಳಂತೆ. ಕೆಲ ದಿನಗಳ  ಹಿಂದೆ ಕರೀನಾ ಕಪೂರ್ ಗೆ ಮನ್ಸೂರ್ ಇ ಮೇಲ್ ಮಾಡಿದ್ದಾರೆ. ತಮ್ಮ ಸ್ಟೋರಿ ಲೈನನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆ ಸ್ಟೋರಿ ಕರೀನಾಳಿಗೆ ಇಷ್ಟವಾಗಿದೆಯಂತೆ. ಈ ಸಂಬಂಧ ಮುಂದಿನವಾರ  ದುಬೈನಲ್ಲಿ ಮೊದಲ ಭೇಟಿ ಪಡೆಯಲಿದೆಯಂತೆ.

ಕರೀನಾ ಈಗ ಆರ್. ಬಾಲ್ಕಿ ನಿರ್ದೇಶನದ ‘ಕಿ ಆಂಡ್ ಕಾ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾಳೆ. ಅರ್ಜುನ್ ಕಪೂರ್ ಜತೆಗಿನ ಈ ಚಿತ್ರದ ಶೂಟಿಂಗ್ ಕೆಲವೇ ದಿನಗಳಲ್ಲಿ ಮುಗಿಯಲಿದೆಯಂತೆ.  ಅಂದುಕೊಂಡಂತೆ ಆದರೆ ಮನ್ಸೂರ್‌ನ ಚಿತ್ರಕ್ಕೆ ಪಾಕಿಸ್ತಾನದ ಕೆಲವೆಡೆ ಕರೀನಾ ಶೂಟಿಂಗಿಗೆ ತೆರಳಬೇಕು. ಆದರೆ, ಕರೀನಾ ಅಧಿಕೃತವಾಗಿ ಪಾಕ್ ಸಿನಿಮಾದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಈ  ಡೈರೆಕ್ಟರ್ ಮಾಡಿರುವುದೇ ಎರಡು ಸಿನಿಮಾ. ೨೦೦೭ರಲ್ಲಿ, ಇನ್ನೊಂದು ೨೦೧೧ರಲ್ಲಿ. ಈಗ ನಾಲ್ಕು ವರುಷ ಬಿಟ್ಟು ಮತ್ತೆ ಸಿನಿಮಾ ಕೈಗೆತ್ತಿಕೊಂಡಿದ್ದಾನೆ. ಈತ ಸಿನಿಮಾ ಮಾಡಿದ್ದಕ್ಕಿಂತ ಟಿವಿ ಶೋಗಳನ್ನು ನಡೆಸಿದ್ದೇ ಹೆಚ್ಚು ಎನ್ನುತ್ತಿದ್ದಾರೆ ಎಲ್ಲರೂ.

ಕೆಲವು ತಿಂಗಳ ಹಿಂದೆ ಬಂದ, ಕರೀನಾ ಕಪೂರ್ ಗಂಡ ಸೈ- ಅಲಿಖಾನ್ ನಟಿಸಿದ ‘ಫ್ಯಾಂಟಮ್’ ಅನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು. ಈ ಚಿತ್ರದ ವಿರುದ್ಧ ಅಲ್ಲಿನ ಪ್ರತಿಭಟನೆಗಳೂ  ನಡೆದಿದ್ದವು. ಆದರೆ, ಈಗಿನ ಕರೀನಾ ನಿರ್ಧಾರ ಈಕೆಯ ಧೈರ್ಯವನ್ನು ಎತ್ತಿಹಿಡಿದಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಸಾವು!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್