ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ `ಧೂಮ್' ಸರಣಿಯಲ್ಲಿ 4ನೇ ಭಾಗ ಬರುತ್ತದಂತೆ. ಅಮಿತಾಭ್ ಬಚ್ಚನ್ ಈ `ಧೂಮ್ 4'ನಲ್ಲಿ ನಟಿಸುತ್ತಿದ್ದಾರೆಂದು ಗಾಳಿಸುದ್ದಿ ಹಬ್ಬಿತ್ತು.
ಆದರೆ, ಇದು ಸುಳ್ಳಂತೆ. `ಈ ವಿಚಾರದಲ್ಲಿ ನಾವು ಅಮಿತಾಭ್ ರನ್ನು ಸಂಪರ್ಕಿಸಿಯೀ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೇಳ್ತೀವಿ.
ಯಾರು ವಿಲನ್ನು, ಯಾರು ಹೀರೋ ಅಂತ' ಎಂದು ರಹಸ್ಯ ಕಾಪಾಡಿಕೊಂಡಿದ್ದಾರೆ ನಿರ್ದೇಶಕ ವಿಜಯ್ಕೃಷ್ಣ. ಬಚ್ಚನ್ ನಟನೆ ರಹಸ್ಯವನ್ನು ನಿರ್ದೇಶಕರು ಸುಮ್ಮನೆ ಬಚ್ಚಿಟ್ಟಿದ್ದಾರಾ?