'ಪ್ರೇಮ್ ರತನ್ ಧನ ಪಾಯೋ' 'ಜಲ್ತೆ ದಿಯೇ' ಹಾಡಿನ ದೃಶ್ಯ 
ಬಾಲಿವುಡ್

'ಪ್ರೇಮ್ ರತನ್...' ಹಾಡಿಗೆ ೭೦೦೦ ಹಣತೆಗಳ ಬಳಕೆ

ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ 'ಪ್ರೇಮ್ ರತನ್ ಧನ ಪಾಯೋ' ಸಿನೆಮಾ ಹಲವಾರು ಕಾರಣಗಳಿಂದ ಸಿನೆ ಅಭಿಮಾನಿಗಳ ಕುತೂಹಲವನ್ನು

ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ 'ಪ್ರೇಮ್ ರತನ್ ಧನ ಪಾಯೋ' ಸಿನೆಮಾ ಹಲವಾರು ಕಾರಣಗಳಿಂದ ಸಿನೆ ಅಭಿಮಾನಿಗಳ ಕುತೂಹಲವನ್ನು ಏರಿಸುತ್ತಲೇ ಇದೆ. ಸಿನೆಮಾದ 'ಜಲ್ತೆ ದಿಯೇ' ಹಾಡಿನ ಚಿತ್ರೀಕರಣಕ್ಕೆ ೭೦೦೦ ಹಣತೆಗಳನ್ನು ಬಳಸಿಕೊಂಡಿರುವುದಾಗಿ ಚಿತ್ರತಂಡ ತಿಳಿಸಿದೆ.

ಈ ಹಾಡಿನ ಚಿತ್ರೀಕರಣಕ್ಕಾಗಿ ಆ ದೀಪಗಳನ್ನು ಹಚ್ಚಿ ಸದಾ ಉರಿಯುವಂತೆ ನೋಡಿಕೊಳ್ಳಲು ೧೫೦ ಜನರಿಗೆ ಕೆಲಸ ಹಿಡಿಯಿತು ಎಂದು ಹೇಳಿಕೆಯಲ್ಲಿ ಬುಧವಾರ ತಿಳಿಸಿದ್ದಾರೆ.

"ಹಾಡಿಗೆ ರಾಜ ವೈಭವತೆ ತರಲು ಸೂರಜ್ (ಬರ್ಜತ್ಯ) ಬಹಳ ಶ್ರಮವಹಿಸಿದರು. ದೀಪಗಳನ್ನು ಹಚ್ಚಿ ಅವುಗಳು ಉರಿಯುವಂತೆ ನೋಡಿಕೊಳ್ಳಲು ೧೫೦ ಜನರಿಗೆ ಕೆಲಸ ಹಿಡಿಯಿತು" ಎಂದು ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಲ್ಮಾನ್ ಮತ್ತು ಬರ್ಜತ್ಯ ೧೬ ವರ್ಷಗಳ ನಂತರ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದು, ಸೋನಮ್ ಕಪೂರ್, ನೀಲ್ ನಿತಿನ್ ಮುಖೇಶ್ ಮತ್ತು ಅನುಪಮ್ ಖೇರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ದೀಪಾವಳಿ ಹಬ್ಬಕ್ಕೆ ನವೆಂಬರ್ ೧೨ ರಂದು ಸಿನೆಮಾ ಬಿಡುಗಡೆಯಾಗಲಿದೆ.

ಇಲ್ಲಿ ಹಾಡಿನ ವಿಡಿಯೋ ನೋಡಿ-ಕೇಳಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT