ಬಾಲಿವುಡ್ ತಾರೆಗಳ ಸಂಗ್ರಹ ಚಿತ್ರ 
ಬಾಲಿವುಡ್

ತಾರೆಗಳ ಸಕ್ಸಸ್ಸಿನ ಹಿಂದೆ ಸುಂದರಿ ಮ್ಯಾನೇಜರ್ಸ್

ಬ್ಯುಸಿ ಶೆಡ್ಯೂಲ್ ನಲ್ಲಿ ತಮ್ಮ ಸ್ಟಾರ್ ಗಳಿಗೆ ಸಿನಿ ವ್ಯವಹಾರ ನಿಭಾಯಿಸುವುದು ಇವರ ಕೆಲಸ. ಸೂಕ್ತ ಸಲಹೆ ನೀಡುತ್ತಾ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಾರೆ. ಆ ಪೈಕಿ ಮಾಡಿರುವುದು ಲೇಡಿ ಮ್ಯಾನೇಜರ್ ಗಳೇ!...

ನಟ- ನಟಿಯರ ಸಕ್ಸಸ್‍ಗೆ ಅವರ ಟಾಲೆಂಟ್ ಮಾತ್ರ ಕಾರಣವಲ್ಲ. ಯಶಸ್ವಿ ಮ್ಯಾನೇಜರ್‍ನ ಕೈಚಳಕವೂ ಇರುತ್ತೆ. ಇವತ್ತು  ಬಾಲಿವುಡ್ ನ ಯಶಸ್ವಿ  ನಟ-ನಟಿಯರ ಹಿಂದೆಯೂ ಈ ಜಾದೂ ನಡೆಯುತ್ತಿದೆ. ಬ್ಯುಸಿ ಶೆಡ್ಯೂಲ್‍ನಲ್ಲಿ ತಮ್ಮ ಸ್ಟಾರ್ ಗಳ ಸಿನಿ ವ್ಯವಹಾರ ನಿಭಾಯಿಸುವುದು ಇವರ  ಕೆಲಸ. ಸೂಕ್ತ ಸಲಹೆ ನೀಡುತ್ತಾ, ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಾರೆ. ಈ ಪೈಕಿ ಹೆಸರು ಮಾಡಿರುವುದು ಲೇಡಿ ಮ್ಯಾನೇಜರ್ ಗಳೇ!

ಹೃತಿಕ್ ರೋಷನ್‍ಗೆ ಮ್ಯಾನೇಜರ್ ಆಗಿರುವವಳು ಅಂಜಲಿ ಅಥಾ. ಹೃತಿಕ್ ಈ ಮಟ್ಟದಲ್ಲಿ ಸಕ್ಸಸ್ ಕಾಣಲು ಇವಳೂ ಕಾರಣ. ಹೀಗಾಗಿ ಅಂಜಲಿಯನ್ನು ಹೃತಿಕ್ ನ ಎರಡನೇ ಬ್ರೈನ್' ಎನ್ನುವುದುಂಟು. ಹೃತಿಕ್‍ನ ಬಹುತೇಕ ಕಾರ್ಯಕ್ರಮ, ಯೋಜನೆಗಳನ್ನು ಫೈನಲ್ ಗೊಳಿಸುವುದು ಅಂಜಲಿಯೇ.
.
ನಟಿ ಪ್ರಿಯಾಂಕಾ ಚೋಪ್ರಾ ಎಲ್ಲಿಯೇ ಇರಲಿ ಅಲ್ಲಿ ಮ್ಯಾನೇಜರ್ ಮೃಣಾಲ್ ಇದ್ದರೇ ಪ್ರಿಯಾಂಕಾ ಚೋಪ್ರಾಗೆ ತಲೆಬಿಸಿಯೇ ಇರುವುದಿಲ್ಲ. ಕಥೆ ಕೇಳುವುದು, ಸಂಭಾವನೆ ಫಿಕ್ಸ್ ಮಾಡುವುದು, ಶೂಟಿಂಗ್ ದಿನಾಂಕ ನಿಗದಿ, ಜಾಹೀರಾತಿಗೆ ಜೋಡಣೆ ಇವೆಲ್ಲವನ್ನೂ ಮೃಣಾಲ್ ಯಶಸ್ವಿಯಾಗಿ ನಿರ್ವಹಿಸುತ್ತಾಳೆ. ಅನುಷ್ಕಾ ಶರ್ಮಾಗೆ ರಿತಿಕಾ ನಾಗ್ಪಾಲ್ ಇಲ್ಲದಿದ್ದರೆ ತಲೆಬಿಸಿ ಆಗುತ್ತಂತೆ. ಇವಳ ಸಿನಿ ಜರ್ನಿಯ ಎಲ್ಲ ಕೆಲಸ ಕಾರ್ಯಗಳಿಗೂ ರಿತಿಕಾ ಹೆಗಲು ಕೊಡುತ್ತಾಳೆ. ತನ್ನ ಕೆರಿಯರ್ ಗ್ರಾಫ್ ನಲ್ಲಿ ರಿತಿಕಾಳದ್ದು ದೊಡ್ಡ ಕೊಡುಗೆ ಇದೆ ಎನ್ನುತ್ತಾಳೆ ಅನುಷ್ಕಾ. ಕೊಹ್ಲಿ ಕೂಡ ಕೆಲವೊಮ್ಮೆ ಅನುಷ್ಕಾಳನ್ನು ಭೇಟಿ ಮಾಡಬೇಕಾದರೆ ರಿತಿಕಾಳಿಗೆ ಮೊದಲು ಕರೆಮಾಡುವುದು.

ಅರ್ಜುನ್ ಕಪೂರ್ ಹಾಗೂ ರಾಣಿ ಮುಖರ್ಜಿ ನಡುವೆ ರುಣಾಲಿ ಭಗತ್ ಪ್ರವೇಶಿಸಿದ ನಂತರವೇ ಅವರ ಸಿನಿ ಜರ್ನಿ ಸಕ್ಸಸ್ ಕಂಡಿದೆಯಂತೆ. ವೃತ್ತಿಯಲ್ಲಿ ಮಹತ್ತರ ಬದಲಾವಣೆ ಆಗಿದ್ದಕ್ಕೆ ರುಣಾಲಿ ಕಾರಣ ಎಂದು ಅರ್ಜುನ್ ಕಪೂರ್ ಸಂತೋಷ ವ್ಯಕ್ತಪಡಿಸುತ್ತಾರೆ.  ರಾಣಿಗೂ  ಅಂಥದ್ದೇ ಖುಷಿ ಇದೆ. ಇಬ್ಬರ ವೃತ್ತಿಪರ ಕಾರ್ಯಗಳನ್ನು ಅಷ್ಟು ಸುಂದರವಾಗಿ ನಿಭಾಯಿಸುತ್ತಾರಂತೆ ರುಣಾಲಿ. ಹುರಿಮೀಸೆ ಹುಡುಗ ರಣವೀರ್ ಸಿಂಗ್‍ಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವವಳು ಸೂಸನ್ ರೋಡ್ರಿಗಸ್ ಎಂಬಾಕೆ. ಅವಳು ನನ್ನ ಬೆನ್ನೆಲುಬು ಎಂದು ರಣವೀರ್ ಸಿಂಗ್ ಬಣ್ಣಿಸಿದ್ದಾರೆ. ನಾಲ್ಕು ವರ್ಷಗಳಿಂದ ಈತನ ಎಲ್ಲ ಸಿನಿ ವ್ಯವಹಾರಗಳ ಸುಗಮ ಹಾದಿಗೆ ರೋಡ್ರಿಗಸ್ ಕಾರಣವಂತೆ. ನಟಿ ಪರಿಣೀತಿ ಚೋಪ್ರಾಗೆ ತನ್ನ ಮ್ಯಾನೇಜರ್ ತೇಜರ್ ಶೆಟ್ಟಿ ಬಾಡಿಗಾರ್ಡ್, ಆರೋಗ್ಯ ಮೇಲ್ವಿಚಾರಕಿ, ಪ್ರವಾಸಿ ಮಾರ್ಗ ದರ್ಶಕಿ... ಹೀಗೆ ಎಲ್ಲವೂ ಆಗಿದ್ದಾಳಂತೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT