ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 
ಬಾಲಿವುಡ್

ಪ್ರಿಯಾಂಕಾ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಮೊಳಗಿಸಿದ್ದಾರೆ: ಭಂಡಾರ್ಕರ್

'ಫ್ಯಾಶನ್' ನಟಿ ಪ್ರಿಯಾಂಕ ಚೋಪ್ರಾ ಭಾರತವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ ಅಂಬುದರ ಬಗ್ಗೆ ಭಾರತೀಯರು ಹೆಮ್ಮೆ ಪಡಬೇಕು ಎಂದು

ಮುಂಬೈ: 'ಫ್ಯಾಶನ್' ನಟಿ ಪ್ರಿಯಾಂಕ ಚೋಪ್ರಾ ಭಾರತವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ ಅಂಬುದರ ಬಗ್ಗೆ ಭಾರತೀಯರು ಹೆಮ್ಮೆ ಪಡಬೇಕು ಎಂದು ನಿರ್ದೇಶಕ ಮಧುರ್ ಭಂಡಾರ್ಕರ್ ಹೇಳಿದ್ದಾರೆ.

"ಪ್ರಿಯಾಂಕಾ ಚೋಪ್ರಾ ಅವರ ಸಾಧನೆಗಳಿಗೆ ನಾವು ಹೆಮ್ಮೆ ಪಡಬೇಕು. ಅವರು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಮೊಳಗಿಸಿದ್ದಾರೆ" ಎಂದು ಭಂಡಾರ್ಕರ್ ಹೇಳಿದ್ದಾರೆ.

ಅಮೆರಿಕಾದ ಟಿವಿ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಭಂಡಾರ್ಕರ್ ಅವರ ಮುಂದಿನ ಸಿನೆಮಾ 'ಮೇಡಂಜಿ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

"ಈ ಸಿನೆಮಾದ ವಿಷಯ ನನಗೆ ಬಹಳ ಆಪ್ತವಾದದ್ದು. ಪ್ರಿಯಾಂಕಾಗೆ ಕೂಡ. 'ಮೇಡಂಜಿ' ವಿಶೇಷ ಸಿನೆಮಾ ಏಕೆಂದರೆ ಅವರು ಇದರ ವಸ್ತುವನ್ನು ಮನಸಾರೆ ಇಷ್ಟ ಪಡುತ್ತಾರೆ. ನಾನು ಉತ್ಸುಕನಾಗಿರುವಂತೆಯೇ ಅವರೂ ಕೂಡ ಉತ್ಸುಕರಾಗಿದ್ದಾರೆ" ಎಂದಿದ್ದಾರೆ ನಿರ್ದೇಶಕ.

ಯೋಜನೆ ವಿಳಂಬವಾದದ್ದನ್ನು ವಿವರಿಸಿದ ಅವರು "ಅವರು ಇತರ ಯೋಜನೆಗಳಲ್ಲಿ ನಿರತರಾಗಿದ್ದರು. ನನಗೆ ೬೦ ದಿನಗಳ ಸಮಯ ಬೇಕು. ಇಬ್ಬರು ಬಿಡುವಾದಾಗ ಚಿತ್ರೀಕರಣ ಪ್ರಾರಂಭಿಸುತ್ತೇನೆ" ಎಂದಿದ್ದಾರೆ.

ಸೆಪ್ಟಂಬರ್ ೨೫ ರಂದು ಬಿಡುಗಡೆಯಾಗಲಿರುವ ತಮ್ಮ ನಿರ್ದೇಶನದ ಚಿತ್ರ 'ಕ್ಯಾಲೆಂಡರ್ ಗರ್ಲ್ಸ್' ಪ್ರಚಾರದಲ್ಲಿ ನಿರ್ದೇಶಕರು ಕಾರ್ಯನಿರತರಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

'ನೀವು ಶಾಶ್ವತ ವಿಪತ್ತು ನಿಧಿ ಏಕೆ ರಚಿಸಿಲ್ಲ': ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಡಿ ಕೆ ಶಿವಕುಮಾರ್

ಟೈಗರ್‌ ಜಿಂದಾ ಹೈ, ಕಿಂಗ್‌ ಈಸ್ ಅಲೈವ್‌: CM ಬಗ್ಗೆ ಬೈರತಿ ಗುಣಗಾನ; ಯತೀಂದ್ರ ಹೇಳಿಕೆಗೆ ಕೆರಳಿ ಕೆಂಡವಾದ ಡಿಕೆಶಿ ಬಣ!

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

SCROLL FOR NEXT