ಬಾಲಿವುಡ್‍ನ ಜಾಕಿಚಾನ್, ಟಾಮ್ ಕ್ರ್ಯೂಸ್ ಎಂದು ತನ್ನನ್ನು ತಾನೇ ಬಿಂಬಿಸಿಕೊಂಡಿರುವ ಅಕ್ಷಯ್ ಕುಮಾರ್ ಇನ್ನೊಂದು ಸಾಹಸ ಮೆರೆದಿದ್ದಾರೆ.
ಇವರ ಮುಂದಿನ 'ಸಿಂಗ್ ಈಸ್ ಬ್ಲಿಂಗ್' ಸಿನಿಮಾದಲ್ಲಿ ಸಿಂಹದೊಂದಿಗೆ ಕಾಣಿಸಿಕೊಂಡಿದ್ದಾರೆ. ಸ್ಪೋರ್ಟ್ಸ್ ಫ್ಯಾನ್ಸಿ ಹೇರ್‍ಕಟ್ ಮಾಡಲಾದ ಮುಫಾಸ' ಎಂಬ ಸಿಂಹ ಈ ಸಿನಿಮಾದ ಫಸ್ಟ್ ಲುಕ್‍ನಲ್ಲಿ ಸಖತ್ ಮಿಂಚುತ್ತಿದೆ.
ಇದೇನು ಆ್ಯನಿಮೇಟೆಡ್ ಸಿಂಹ ಅಲ್ಲ ಎಂದಿದ್ದಾರೆ ಅಕ್ಷಯ್. ಇದರೊಂದಿಗೆ ನಟಿಸುವಾಗ ಅಕ್ಷಯ್ ಗೆ ಸಿಕ್ಕಾಪಟ್ಟೆ ಹೆದರಿಕೆ ಆಗಿತ್ತಂತೆ. ಕೋಪದಲ್ಲಿ ಗರ್ಜಿಸಿ, ಕೆಲವು ಗ್ಲಾಸ್‍ಗಳನ್ನು ಪುಡಿಪುಡಿ ಮಾಡಿತ್ತಂತೆ. ಇದಾದ ನಂತರ ಕೆಲವೇ ಗಂಟೆಗಳಲ್ಲಿ ಈ ಸ್ಟಿಲ್ಸ್ ಗಳ ಚಿತ್ರೀಕರಣ ನಡೆದಿದೆ. ಈ ಸಿನಿಮಾ ಅಕ್ಟೋಬರ್ 2ರಂದು ತೆರೆಕಾಣಲಿದೆ.