ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 
ಬಾಲಿವುಡ್

ಶ್ವೇತ ಭವನ ಮಾಧ್ಯಮ ವಕ್ತಾರರ ವಾರ್ಷಿಕ ಔತಣ ಕೂಟಕ್ಕೆ ಪ್ರಿಯಾಂಕಾಗೆ ಆಹ್ವಾನ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೇವಲ ಹಾಲಿವುಡ್ ನಲ್ಲಷ್ಟೇ ತಮ್ಮ ಬೇರುಗಳನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಬದಲಾಗಿ ತಮ್ಮ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಜಾಗತಿಕವಾಗಿ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೇವಲ ಹಾಲಿವುಡ್ ನಲ್ಲಷ್ಟೇ ತಮ್ಮ ಬೇರುಗಳನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಬದಲಾಗಿ ತಮ್ಮ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಜಾಗತಿಕವಾಗಿ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಅಮೆರಿಕಾದ ಶ್ವೇತ ಭವನದಲ್ಲಿ ಮಾಧ್ಯಮ ವಕ್ತಾರರಿಗೆ ಆಯೋಜಿಸಲಾಗುವ ವಾರ್ಷಿಕ ಔತಣ ಕೂಟಕ್ಕೆ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಆಹ್ವಾನ ಪಡೆದಿದ್ದಾರೆ. ಈ ವಾರ್ಷಿಕ ಮಾಧ್ಯಮ ವಕ್ತಾರರ ಔತಣಕೂಟವನ್ನು ಈ ತಿಂಗಳ ಕೊನೆಗೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಆಯೋಜಿಸಿದ್ದಾರೆ.

ಹಾಲಿವುಡ್ ನಟರಾದ ಬ್ರಾಡ್ಲಿ ಕೂಪರ್, ಗ್ಲಾಡಿಸ್ ನೈಟ್, ಜೇನ್ ಫಂಡಾ ಮತ್ತು ಲೂಸಿ ಲಿಯೂ ಇವರ ಜೊತೆ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯ ಪ್ರಕಾರ 'ಶ್ವೇತ ಭವನದ ಮಾಧ್ಯಮ ವಕ್ತಾರರ ಔತಣಕೂಟವನ್ನು ಪಾರಂಪಾರಿಕವಾಗಿ ಮಾಧ್ಯಮ ಬಂಧುಗಳು, ಟಿವಿ ವಾಹಿನಿಗಳು, ಇತರ ಮನರಂಜನಾ ಮಾಧ್ಯಮಗಳಿಗಾಗಿ' ಆಯೋಜಿಸಲಾಗುತ್ತದೆ.

ಸದ್ಯಕ್ಕೆ 'ಕ್ವಾಂಟಿಕೋ' ಧಾರಾವಾಹಿಯ ಹಾಗೂ ಹಾಲಿವುಡ್ ಸಿನೆಮಾ 'ಬೇವಾಚ್' ನ ಚಿತ್ರೀಕರಣದಲ್ಲಿ ನಿರತರಾಗಿರುವ ಪ್ರಿಯಾಂಕ ಇನ್ನೂ ಈ ಔತಣಕೂಟದಲ್ಲಿ ಭಾಗವಹಿಸುವುದರ ಬಗ್ಗೆ ಧೃಢೀಕರಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT