ಮುಂಬೈ: ನಿರ್ದೇಶಕ ಅನುರಾಗ್ ಕಷ್ಯಪ್ ನಿರ್ದೇಶನದ ರಾಮನ್ ರಾಘವನ್ 2.0 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಚಿತ್ರದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಸಿರಿಯಲ್ ಕಿಲ್ಲರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಮಸಾನ್ ಚಿತ್ರದ ನಟ ವಿಕಿ ಕೌಶಲ್ ಸಹ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಿರ್ದೇಶಕ ಕಷ್ಯಪ್ ತಮ್ಮ ಟ್ವಿಟರ್ ನಲ್ಲಿ ಚಿತ್ರದ ಪೋಸ್ಟರ್ ಹಾಕಿಕೊಂಡಿದ್ದು, ಪೋಸ್ಟರ್ ನಲ್ಲಿ ನವಾಜುದ್ದೀನ್ ಸಿದ್ದಿಕಿ ಕೆಂಪು ಕಣ್ಣಿನಿಂದ ಜಗತ್ತನ್ನು ನೋಡುವಂತಿದೆ.
ಕ್ಯಾನೆಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಮನ್ ರಾಘವನ್ 2.0 ಚಿತ್ರದ ಪ್ರದರ್ಶನಗೊಳ್ಳಲಿದ್ದು, ಜೂನ್ 24ಕ್ಕೆ ಭಾರತದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.