ಮುಂಬೈ: ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ಮಗಧೀರ ವನ್ನು ರಿಮೇಕ್ ಮಾಡುತ್ತಿಲ್ಲ ಎಂದು ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದಾರೆ.
ರಾಮ್ ಚರಣ್ ತೇಜ ಅಭಿನಯದ ಮಗಧೀರ ಚಿತ್ರವನ್ನು ಬನ್ಸಾಲಿ ರಿಮೇಕ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬನ್ಸಾಲಿ ಅವರು ನಾನು ಯಾವುದೇ ಚಿತ್ರವನ್ನು ರಿಮೇಕ್ ಮಾಡುತ್ತಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
2009ರಲ್ಲಿ ತೆರೆಗೆ ಬಂದಿದ್ದ ಮಗಧೀರ ಚಿತ್ರ ಟಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು. ಚಿತ್ರದಲ್ಲಿ ರಾಮ್ ಗೆ ಕಾಜೋಲ್ ಅಗರವಾಲ್ ಸಾಥ್ ನೀಡಿದ್ದರು.