ಐಶ್ವರ್ಯ ರೈ 
ಬಾಲಿವುಡ್

ಸೊಸೆ ಐಶ್ವರ್ಯಾ ಮೇಲೆ ಅಮಿತಾಬ್ ಬಚ್ಚನ್ ಮುನಿಸು?

ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ, ರಣಬೀರ್ ಕಪೂರ್ ಜೊತೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಬಿಗ್ ಬಿ ಅಮಿತಾಬ್ ಬಚ್ಚನ್ ..

ಮುಂಬಯಿ: ಏ ದಿಲ್ ಹೇ ಮುಷ್ಕಿಲ್  ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ,  ರಣಬೀರ್ ಕಪೂರ್  ಜೊತೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆ ಮೇಲೆ ಮುನಿಸಿಕೊಳ್ಳಲು ಕಾರಣವಾಗಿದೆಯಂತೆ.

ರಣಬೀರ್ -ಐಶ್ವರ್ಯ ಕ್ಲೋಸ್ ದೃಶ್ಯಗಳಿಗೆ ಬಚ್ಚನ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಸೊಸೆ ಐಶ್ವರ್ಯ ರೈ ರಣಬೀರ್ ಜತೆಗಿನ ಬೆಚ್ಚನೆಯ ದೃಶ್ಯಗಳು ಬಚ್ಚನ್ ಕುಟುಂಬಕ್ಕೆ ಇಷ್ಟವಾಗುತ್ತಿಲ್ವಂತೆ. ಐಶ್ವರ್ಯ -ರಣಬೀರ್ ಮಧ್ಯದ ಕೆಲ ಕ್ಲೋಸ್ ಆಗಿರೋ ದೃಶ್ಯಗಳನ್ನು ತೆಗೆದುವಂತೆ ಬಚ್ಚನ್ ಕುಟುಂಬ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಕರಣ್ ಜೋಹರ್ ಆ ದೃಶ್ಯಗಳನ್ನು ಡಿಲೀಟ್ ಮಾಡ್ಬೇಕು ಎಂಬುದು ಬಚ್ಚನ್ ಅಭಿಪ್ರಾಯವಂತೆ. ರಣ್ ಬೀರ್ ಜೊತೆಗೆ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಐಶ್ವರ್ಯ ಈ ಹಿಂದೆಯೇ ನಿರ್ದೇಶಕರಿಗೆ ತಿಳಿಸಿದ್ದರಂತೆ. ಮಗು ಆದ ನಂತರ ಜಸ್ಬಾ ಚಿತ್ರದ ಮೂಲಕ ಮತ್ತೆ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಐಶ್ವರ್ಯ ಸರಬ್ಜೀತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.  ಐಶ್ವರ್ಯಾ ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಅಭಿನಯದ ಏ ದಿಲ್ ಹೇ ಮುಷ್ಕಿಲ್ ಅಕ್ಟೋಂಬರ್ 28ಕ್ಕೆ ರಿಲೀಸ್ ಕಾಣಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಓಮನ್ ಕರಾವಳಿಯಲ್ಲಿ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

ಅಸ್ಸಾಂ: ರೋಡ್ ರೋಲರ್ ಬಳಸಿ ಸೀಜ್ ಮಾಡಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ! Video

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

KSRTC ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು, ವಿಡಿಯೋ ವೈರಲ್

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!