ನವದೆಹಲಿ: ಮಾಡಿದ ತಪ್ಪನ್ನು ಸರಿ ಪಡಿಸಿಕೊಳ್ಳುವಲ್ಲಿ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಯಾವಾಗಲೂ ಮುಂದು. ಇಲ್ಲಿ ಆದದ್ದೂ ಇದೇ.
ದಿಲ್ ಸೇ ಚಿತ್ರದ 18 ವರ್ಷಗಳ ಸಂಭ್ರಮಾಚರಣೆ ವಿಡಿಯೋ ಅಪ್ ಲೋಡ್ ಮಾಡಿದ್ದ ಶಾರೂಖ್ ಖಾನ್, ದಿಲ್ ಸೇ ಚಿತ್ರ ತಂಡದ ಎಲ್ಲರಿಗೂ ಧನ್ಯವಾದ ಹೇಳಿದ್ದರು.
ಆದರೆ ಈ ವಿಡಿಯೋದಲ್ಲಿ ದಿಲ್ ಸೇ ನಟಿ ಪ್ರೀತಿ ಜಿಂಟಾ ಹೆಸರನ್ನು ಹೇಳುವುದನ್ನು ಶಾರೂಖ್ ಖಾನ್ ಮರೆತು ಬಿಟ್ಟಿದ್ದರು. ಕೂಡಲೇ ತಮ್ಮ ತಪ್ಪಿನ ಅರಿವಾಗಿ ಪ್ರೀತಿಯಲ್ಲಿ ಕ್ಷಮೆ ಕೋರಿ ಮತ್ತೆ ವಿಡಿಯೋವನ್ನು ರಿ- ರಿಲೀಸ್ ಮಾಡಿದ್ದಾರೆ ಶಾರೂಖ್ ಖಾನ್. ದಿಲ್ ಸೇ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ ಹಾಗೂ 6 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.