ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ 
ಬಾಲಿವುಡ್

ಪ್ರಶಸ್ತಿ ಅಥವಾ ಹಣಕ್ಕಾಗಿ ನಾನು ಪ್ರಧಾನ ಸಮಾರಂಭಗಳಿಗೆ ಹೋಗುವುದು: ಕರಣ್ ಜೋಹರ್

ಪ್ರಶಸ್ತಿ ಅಥವಾ ಹಣ ಸ್ವೀಕರಿಸುವುದಕ್ಕಾಗಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ಹಾಜರಾಗುವುದು ಎಂದಿದ್ದಾರೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್.

ಮುಂಬೈ: ಪ್ರಶಸ್ತಿ ಅಥವಾ ಹಣ ಸ್ವೀಕರಿಸುವುದಕ್ಕಾಗಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ಹಾಜರಾಗುವುದು ಎಂದಿದ್ದಾರೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್. 
ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಕೆಲವು ಬಾಲಿವುಡ್ ನಟರು ನಿಲುವು ತೆಗೆದುಕೊಂಡಿರುವುದರ ಬಗ್ಗೆ, ಶುಕ್ರವಾರ ನಡೆದ ೬೨ ನೇ ಜಿಯೋ ಫಿಲಂಫೇರ್ ಪ್ರಶಸ್ತಿ ೨೦೧೭ ಪತ್ರಿಕಾಗೋಷ್ಠಿಯಲ್ಲಿ ಕರಣ್ ಅವರನ್ನು ಪ್ರಶ್ನಿಸಿದಾಗ "ನಮ್ಮ ಉದ್ದಿಮೆಯಲ್ಲಿ ಅಂತಹ ನಿಲುವು ತೆಗೆದುಕೊಂಡಿರುವವರು ಕೆಲವೇ ಮಂದಿ. ಅಮೀರ್ ಖಾನ್ ಮತ್ತು ಕಂಗನಾ ರಣಾವತ್ ಅಂತಹವರು ಮಾತ್ರ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಬರುವುದೇ ಇಲ್ಲ. 
"ನಾನು ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ ಮತ್ತು ಅದಕ್ಕೆ ನನಗೆ ಇಷ್ಟವೂ ಇಲ್ಲ ಏಕೆಂದರೆ ಪ್ರಶಸ್ತಿ ಅಥವಾ ಹಣಕ್ಕಾಗಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಿಗೆ ಹೋಗುವುದು. ನಾನು ಫಿಲಂಫೇರ್ ಬರುವ ಕಾರಣ ಇತಿಹಾಸದ ಭಾಗವಾಗಬೇಕು" ಎಂದಿದ್ದಾರೆ. 
ಆದರೆ ಬಹಳಷ್ಟು ಪ್ರಶಸ್ತಿ ಪ್ರಧಾನ ಸಮಾರಂಭಗಳು ಇರುವುದರಿಂದ ಜನರ ಉತ್ಸಾಹಕ್ಕೆ ಪೆಟ್ಟು ಬಿದ್ದಿದೆ ಎಂದು ಅವರು ನಂಬುತ್ತಾರೆ. "ಆದುದರಿಂದ ಅವರ ಪ್ರಾಮಾಣಿಕತೆ ಮತ್ತು ನಂಬಿಕೆ, ಕೆಲವು ಬಾರಿ ಸಂದೇಹ ಮೂಡಿಸುತ್ತದೆ... ಅವುಗಳು ನಿಜವೋ ಅಥವಾ ಅಲ್ಲವೋ, ಜನ ಅವುಗಳನ್ನು ನೋಡುತ್ತಾರೆ. ಅಂತಹ ಸಮಾರಂಭಗಳು ಟಿವಿ ವಾಹಿನಿಗಳಲ್ಲಿ ಮೂಡಬೇಕೆಂದು ಬಯಸುತ್ತಾರೆ ಏಕೆಂದರೆ ಚಾನಲ್ ಗಳು ಹಲವಾರಿವೆ ಮತ್ತು ಟಿ ಆರ್ ಪಿ ಬೇಕಾಗಿರುತ್ತದೆ. ಜನ ಅವುಗಳನ್ನು ನೋಡಿ ನಂಬುತ್ತಾರೆ ಕೂಡ. 
"ಆದುದರಿಂದ ಅಂತಹ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಬಲ ನೀಡಬೇಕೋ ಅಥವಾ ದೂರವುಳಿಯಬೇಕೋ ಎಂಬ ಗೊಂದಲದಲ್ಲಿ ನಾವೆಲ್ಲಾ ಇದ್ದೇವೆ" ಎಂದು ಕರಣ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

‘ನೇಪಾಳಿಗರೇ, ನೀವು ಒಂಟಿಯಲ್ಲ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ’: ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ನಟ ಸೋನು ಸೂದ್!

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...