ಮುಂಬೈ: ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಗೆ ಬಾಲಿವುಡ್ ನಲ್ಲಿ ದೊರೆಯುತ್ತಿರುವ ಬೆಂಬಲ ನೋಡಿ ಬಾಲಿವುಡ್ ನ ಐಟಂ ಗರ್ಲ್ ರಾಖಿ ಸಾವಂತ್ ಕೂಡ ನೀಲಿ ತಾರೆಯಾಗಲು ಹೊರಟಿದ್ದಾಳೆ.
ರಾಖಿ ಸಾವಂತ್ ಹಿಂದಿನಿಂದಲೂ ಸನ್ನಿಲಿಯೋನ್ ಳನ್ನು ದ್ವೇಷಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸನ್ನಿ ಲಿಯೋನ್ ಜೊತೆ ಕೆಲಸ ಮಾಡಲು ತಾನು ಸಿದ್ಧ ಎಂದು ಅಮೀರ್ ಖಾನ್ ಕೂಡ ಹೇಳಿದ್ದಾರಲ್ಲವೇ ಎಂದು ರಾಖಿ ಸಾವಂತ್ ನನ್ನು ಪತ್ರಕರ್ತರು ಯಾರೋ ಕಾಲೆಳೆದರಂತೆ. ಅದಕ್ಕೆ ರಾಖಿ ಸಾವಂತ್ ಚುಚ್ಚುವ ರೀತಿಯಲ್ಲಿ, ಅಮೀರ್ ಖಾನ್ ಸನ್ನಿ ಜೊತೆ ನಟಿಸುವುದೇ? ಅದಕ್ಕಿಂತಲೂ ಒಂದು ಸಿಹಿ ಸುದ್ದಿ ನನ್ನ ಬಳಿ ಇದೆ, ಹೇಳುತ್ತೇನೆ ಕೇಳಿ, ರಾಖಿ ಸಾವಂತ್ ಸದ್ಯದಲ್ಲಿಯೇ ನೀಲಿ ತಾರೆಯಾಗಲಿದ್ದಾಳೆ. ನಾನು ನೀಲಿ ತಾರೆಯಾಗಲು ಬಯಸುತ್ತೇನೆ ಅಂತ ಹೇಳಿ ಪತ್ರಕರ್ತರನ್ನೇ ದಂಗುಬಡಿಸಿದಳಂತೆ. ಇದಕ್ಕೆ ಅಮೀರ್ ಖಾನ್ ಏನು ಪ್ರತಿಕ್ರಿಯೆ ನೀಡುತ್ತಾರೋ?