ಲಾಸ್ ಏಂಜಲೀಸ್: ಬಾಲಿವುಡ್ ನಟಿ ಪ್ರೀತಿ ಜಿಂಟಾ ಗೆಳೆಯ ಜೆನೆ ಗುಡ್ ಎನಾಫ್ ಅವರನ್ನು ಅಮೆರಿಕದಲ್ಲಿ ವಿವಾಹವಾಗಿದ್ದಾರೆ ಎಂದು ವೆಬ್ ಸೈಟ್ ವೊಂದು ವರದಿ ಮಾಡಿದೆ.
ಲಾಸ್ ಏಂಜಲೀಸ್‌ನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿವಾಹ ಸಮಾರಂಭದಲ್ಲಿ ಪ್ರೀತಿ ಜಿಂಟಾ ಮತ್ತು ಜೆನೆ ಗುಡ್ ಅವರ ಕುಟುಂಬ ವರ್ಗದವರು ಮಾತ್ರ ಉಪಸ್ಥಿತರಿದ್ದರು ಎನ್ನಲಾಗಿದೆ.
ಮದುವೆ ಆರತಕ್ಷತೆ ಮುಂಬೈನಲ್ಲಿ ನಡೆಯಲಿದ್ದು, ಆರತಕ್ಷತೆಗೆ ಬಾಲಿವುಡ್ ಹಾಗೂ ಗಣ್ಯರನ್ನು ಆಹ್ವಾನಿಸುವರು ಎನ್ನಲಾಗಿದೆ.