ಬಾಲಿವುಡ್

ಪೈರಸಿಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು: ಕಂಗನಾ, ಶಾರುಖ್

Vishwanath S

ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೂ ಮುನ್ನ ಪೈರಸಿ ಮೂಲಕ ಮಾರುಕಟ್ಟೆ ತಲುಪುತ್ತಿದ್ದು ಇದು ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸಿದೆ. ಹೀಗಾಗಿ ಇದನ್ನು ಬುಡಸಮೇತ ಕಿತ್ತೆಸೆಯಬೇಕಾಗಿದೆ ಎಂದು ಬಾಲಿವುಡ್ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ಉಡ್ತಾ ಪಂಜಾಬ್, ಗ್ರೇಟ್ ಗ್ರ್ಯಾಂಡ್ ಮಸ್ತಿ ಹಾಗ ಸುಲ್ತಾನ್ ಚಿತ್ರಗಳು ಬಿಡುಗಡೆಗೂ ಮುನ್ನ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದವು. ಚಿತ್ರರಂಗಕ್ಕೆ ಕಂಟಕವಾಗಿ ಪರಿಣಮಿಸಿದೆ ಎಂದು ಬಾಲಿವುಡ್ ನಟ ಶಾರುಖ್ ಖಾನ್, ಇರ್ಫಾನ್ ಖಾನ್, ಕಂಗನಾ ರಣಾವತ್ ಚಿತ್ರ ನಿರ್ದೇಶಕ ಇಮ್ತಿಯಾಜ್ ಅಲಿ ಅಭಿಪ್ರಾಯಪಟ್ಟಿದ್ದಾರೆ.

ನಾಳೆ ಹಿಂದಿಯ ಮದಾರಿ ಚಿತ್ರ ಬಿಡುಗಡೆಯಾಗುತ್ತಿದ್ದು ಇದರ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಚಿತ್ರ ವೀಕ್ಷಣೆಗೆ ಬಂದಿದ್ದ ಕಂಗನಾ ರಣಾವತ್ ಅವರು, ಪೈರಲ್ ಒಂದು ದುದೈವದ ಸಂಗತಿ, ಸಿನಿಮಾ ನಿರ್ಮಾಣದಲ್ಲಿ ನೂರಾರು ಜನರ ಶ್ರಮವಿರುತ್ತದೆ. ಹೀಗಿರುವಾಗ ಅದನ್ನು ನಕಲು ಮಾಡಿ ಮಾರುಕಟ್ಟೆಗೆ ಸಿಡಿ, ಡಿವಿಡಿಗಳನ್ನು ಬಿಡುಗಡೆ ಮಾಡುವುದು ಖಂಡನೀಯ ಎಂದರು.

ಇದೇ ವೇಳೆ ಮಾತನಾಡಿದ ಶಾರುಕ್ ಖಾನ್ ಸಹ ಪೈರಸಿವೊಂದು ಪೆಡಂಭೂತವಾಗಿ ಪರಿಣಮಿಸಿದೆ. ಇದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು ಎಂದು ಹೇಳಿದ್ದಾರೆ.

SCROLL FOR NEXT