ಡಿಂಪಲ್ ಕಪಾಡಿಯಾ 
ಬಾಲಿವುಡ್

ರಾಜೇಶ್ ಖನ್ನಾ ಕಳಪೆ ಅಭಿನಯ: ನಾಸಿರುದ್ದೀನ್ ಶಾ ಟೀಕೆಗೆ ಡಿಂಪಲ್ ಕಪಾಡಿಯಾ ತಿರುಗೇಟು

ದಿವಂಗತ ರಾಜೇಶ್ ಖನ್ನಾ ಬಗ್ಗೆ ನಾಸಿರುದ್ದೀನ್ ಶಾ ಮಾಡಿರುವ ಟೀಕೆ ಸಂಬಂಧ ಪತ್ನಿ ಡಿಂಪಲ್ ಕಪಾಡಿಯಾ ಕೊನೆಗೂ ಮೌನ ಮುರಿದಿದ್ದಾರೆ....

ನವದೆಹಲಿ: ದಿವಂಗತ ರಾಜೇಶ್ ಖನ್ನಾ ಬಗ್ಗೆ ನಾಸಿರುದ್ದೀನ್ ಶಾ ಮಾಡಿರುವ ಟೀಕೆ ಸಂಬಂಧ ಪತ್ನಿ ಡಿಂಪಲ್ ಕಪಾಡಿಯಾ ಕೊನೆಗೂ ಮೌನ ಮುರಿದಿದ್ದಾರೆ.

ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ರಾಜೇಶ್ ಖನ್ನಾ ಅವರ ಸಿನಿ ಪಯಣ ಹಾಗೂ ಅವರು ಗಳಿಸಿದ ಆಸ್ತಿಯನ್ನು ಮುಕ್ತವಾಗಿ ರ್ಚಚಿಸಬಹುದಾಗಿದೆ. ಬಾಲಿವುಡ್​ಗೆ ಖನ್ನಾ ನೀಡಿದ ಕೊಡುಗೆ ಅಭಿಮಾನಿಗಳಿಗೆ ತಿಳಿದಿದೆ ಎಂದು ಹೇಳುವ ಮೂಲಕ ಡಿಂಪಲ್ ಕಪಾಡಿಯ ಹಿರಿಯ ನಟ ನಾಸಿರುದ್ದಿನ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ.

ನಟ ರಾಜೇಶ್ ಖನ್ನಾ 70 ರ ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಕಳಪೆ ಮಟ್ಟಕ್ಕೆ ಕೊಂಡೊಯ್ದಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಯಿಸಿದ ರಾಜೇಶ್ ಖನ್ನಾ ಅವರ ಪತ್ನಿ ಡಿಂಪಲ್ ಕಪಾಡಿಯ, ರಾಜೇಶ್ ಖನ್ನಾ ಅವರು ಏನು ಎನ್ನುವುದನ್ನು ನಾನು ಹೇಳಬೇಕಾಗಿಲ್ಲ. ಅವರ ಲಕ್ಷಾಂತರ ಅಭಿಮಾನಿಗಳು ಈ ವಿಚಾರವಾಗಿ ಸಾಕಷ್ಟು ತಿಳಿದುಕೊಂಡಿದ್ದಾರೆ. ದೇಶದಲ್ಲಿ ಸಮಸ್ತ ಪ್ರಜೆಗಳಿಗೂ ಖನ್ನಾ ಅವರ ಕುರಿತು ಮಾತನಾಡುವ ಹಕ್ಕಿದೆ ಎಂದು ಹೇಳಿದ್ದಾರೆ.

ಟಿ ವಿ ಕಾರ್ಯಕ್ರಮವೊಂದರ ಸಂದರ್ಶನದಲ್ಲಿ ನಾಸೀರುದ್ದಿನ್ ಶಾ ಮಾತನಾಡುತ್ತ, ರಾಜೇಶ್ ಖನ್ನಾ ಒಬ್ಬ ಕಳಪೆ ನಟ, 70 ರ ದಶಕದಲ್ಲಿ ಆತನಿಂದ ಚಿತ್ರೋದ್ಯಮ ಅಧೋಗತಿಗೆ ಇಳಿದಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಾ ಹೇಳಿಕೆಗೆ ರಾಜೇಶ್ ಖನ್ನಾ ಪುತ್ರಿ ಟ್ವಿಂಕಲ್ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದರು.ಬದುಕಿದ್ದಾಗ ಗೌರವ ನೀಡುವುದು ಬೇಡ. ಕಡೇ ಪಕ್ಷ ಸತ್ತ ನಂತರವಾದರೂ ವ್ಯಕ್ತಿಗಳಿಗೆ ಗೌರವ ನೀಡುವುದನ್ನು ಕಲಿಯಿರಿ ಎಂದು ಟ್ವೀಟ್ ಮಾಡಿದ್ದರು. ಅದಾದ ನಂತರ ನಾಸಿರುದ್ದೀನ್ ಶಾ ಕ್ಷಮಾಪಣೆ ಕೋರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್