ಮುಂಬೈ: ಅನೇಕ ಹಸಿಬಿಸಿ ವಿಡಿಯೋಗಳ ಮೂಲಕ ಸುದ್ದಿ ಮಾಡಿರುವ ವಿವಾದಿತ ಬೆಡಗಿ ಮತ್ತು ಆನ್ ಲೈನ್ ಸೆನ್ಸೇಷನ್ ಪೂನಂ ಪಾಂಡೆ ಇದೀಗ ಮತ್ತೊಂದು ಅಂತಹದ್ದೇ ವಿಡಿಯೋ ಮೂಲಕ ಸುದ್ದಿಯಾಗಿದ್ದಾಳೆ.
'ಟ್ವೀಟ್ ಹಾರ್ಟ್ಸ್!! ಹೊಸ ವಿಡಿಯೋ ಬರುತ್ತಿದೆ... ಗೇಮ್ ವಿಡಿಯೋ ಹೇಗೆ'' ಎಂದು ವಿಡಿಯೋದ ತುಣುಕೊಂದನ್ನು ತನ್ನ ಅಭಿಮಾನಿಗಳಿಗಾಗಿ ಹರಿಯಬಿಟ್ಟು ಕುತೂಹಲ ಮೂಡಿಸಿದ್ದಾಳೆ.
ವಿಡಿಯೋದಲ್ಲಿ ಆಕೆ ಬಿಕಿನಿ ಧರಿಸಿ ಕೊಳವೊಂದರ ಸಮೀಪ ವಿದೇಶಿ ಹುಡುಗಿಯೊಂದಿಗೆ ಆಟವಾಡುತ್ತಿದ್ದಾಳೆ. ಪೂನಂ ಪಾಂಡೆಯ ಕಟ್ಟಾ ಅಭಿಮಾನಿಗಳು ಇಂತಹದ್ದೇ ವಿಡಿಯೋಕ್ಕಾಗಿ ಕಾಯುತ್ತಿದ್ದರು.
ಇದಕ್ಕೂ ಮುನ್ನ ಪೂನಂ ಪಾಂಡೆ ಯೋಗದ ಭಂಗಿಯಲ್ಲಿ ಮತ್ತು ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಜಿಂಗಲ್ ಬೀ..ಬ್ಸ್ ಎಂದು, ಹೋಲಿ ಸಂದರ್ಭದಲ್ಲಿ ಹೋಲಿಯಾಟವಾಡುವ ವಿಡಿಯೋಗಳೆಲ್ಲ ಆನ್ ಲೈನ್ ನಲ್ಲಿ ಭಾರೀ ಜನಪ್ರಿಯವಾಗಿದ್ದವು.
ಆಕೆಯ ಹಾಟ್ ಫೋಟೋಗಳು ಕೂಡ ಪ್ರತಿದಿನವೆಂಬಂತೆ ಮಾಧ್ಯಮಗಳಲ್ಲಿ, ಆನ್ ಲೈನ್ ನಲ್ಲಿ ಸುದ್ದಿಯಾಗುತ್ತವೆ. ಆಕೆ ಭಾರತ ಕ್ರಿಕೆಟ್ ತಂಡ ಮತ್ತು ಅವರ ಪಂದ್ಯಗಳಿಗೆ ಸಂಬಂಧಪಟ್ಟಂತೆ ಧೈರ್ಯದ ಹೇಳಿಕೆ ನೀಡಿ ಭಾರೀ ಸುದ್ದಿಯಾಗಿದ್ದಳು.