ಬಾಲಿವುಡ್

ಉಡ್ತಾ ಪಂಜಾಬ್ ಲೀಕ್ ಪ್ರಕರಣ: ಓರ್ವನ ಬಂಧನ

Vishwanath S

ಮುಂಬೈ: ಉಡ್ತಾ ಪಂಜಾಬ್ ಚಿತ್ರ ಆನ್ ಲೈನ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೆಬ್ ಸೈಟ್ ಮಾಲೀಕರೊಬ್ಬರನ್ನು ಬಂಧಿಸಿದ್ದಾರೆ.

ಟೊರೆಂಟ್ ವೆಬ್ ಸೈಟ್ ನ Allzmovies.in ವೆಬ್ ಸೈಟ್ ನಲ್ಲಿ ಚಿತ್ರಗಳು ಪ್ರತಿಗಳು ಲೀಕ್ ಆಗಿದ್ದವು, ಇದರಿಂದಾಗಿ ಪೊಲೀಸರು ದೆಹಲಿಯಲ್ಲಿ Allzmovies.in ವೆಬ್ ಸೈಟ್ ಮಾಲೀಕ ದಿಲೀಪ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.

ಪಂಜಾಬ್ ರಾಜ್ಯದಲ್ಲಿನ ಡ್ರಗ್ ಹಾವಳಿಯ ಕಥಾವಸ್ತು ಹೊಂದಿರುವ ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕತ್ತರಿ ಪ್ರಯೋಗ ಮಾಡಬೇಕೆಂದು ಸೆನ್ಸಾರ್ ಮಂಡಳಿ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ವಿವಾದ ಹುಟ್ಟಿಕೊಂಡಿತ್ತು. ವಿವಾದಿಂದಾಗಿ ಮಧ್ಯಪ್ರವೇಶಿಸಿದ ಹೈಕೋರ್ಟ್ ಕೇವಲ 1 ಕತ್ತರಿ ಪ್ರಯೋಗದ ಮಾಡಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿತ್ತು.

ಸಿನಿಮಾ ಬಿಡುಗಡೆಗೂ ಎರಡು ದಿನಗಳ ಮುಂಚಿತವಾಗಿ ಚಿತ್ರದ ಟೊರೆಂಟ್ ವೆಬ್ ಸೈಟ್ ನಲ್ಲಿ ಲೀಕ್ ಆಗಿದ್ದವು. ಇದನ್ನು ಗಮನಿಸಿದ ನಿರ್ಮಾಪಕರು ಚಿತ್ರ ಲೀಕ್ ಆಗಲು ಸೆನ್ಸಾರ್ ಮಂಡಳಿಯೇ ಕಾರಣ ಎಂದು ದೂರಿದರು. ಇದಕ್ಕೆ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪಹಲಾಜ್ ನಿಹಲಾನಿ ಸಿನಿಮಾ ಲೀಕ್ ಆಗಿದ್ದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

SCROLL FOR NEXT