ಬಾಲಿವುಡ್

ಕುರ್ಬಾನಿ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದು ಸರಿಯಲ್ಲ: ನಟ ಇರ್ಪಾನ್ ಖಾನ್ ಹೇಳಿಕೆ

Shilpa D

ಜೈಪುರ : ಕುರ್ಬಾನಿ ಹೆಸರಲ್ಲಿ ಆಡು ಅಥವಾ ಮೇಕೆ ಬಲಿ ಕೊಡುವುದು ಸರಿಯಲ್ಲ, ಕುರ್ಬಾನಿಯ ಅರ್ಥ ಬಲಿದಾನ, ಅದು ದುಡ್ಡುಕೊಟ್ಟು ಖರೀದಿಸಿ ಬಲಿದಾನ ಮಾಡುವುದು ಅಲ್ಲ ಎಂದು ನಟ ಇರ್ಫಾನ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಮ್ಮ "ಮದರಿ' ಚಿತ್ರದ ಬಗ್ಗೆ ಜೈಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಇರ್ಫಾನ್‌ ಖಾನ್‌, ಇಸ್ಲಾಂನಲ್ಲಿರುವ ಬಲಿದಾನ ಮತ್ತು ಉಪವಾಸದ ಕ್ರಮವನ್ನು ಪ್ರಶ್ನಿಸುವ ವಿವಾದ ಸೃಷ್ಟಿಸಿದ್ದಾರೆ.

ಕುರ್ಬಾನಿಯ ಅರ್ಥ ಬಲಿದಾನ; ಅದು ದುಡ್ಡು ಕೊಟ್ಟು ಖರೀದಿಸಿ ಬಲಿದಾನ ನೀಡಲ್ಪಡುವ ಕುರಿ ಅಥವಾ ಮೇಕೆಗೆ ಸಂಬಂಧಿಸಿದ ವಿಷಯ ಅಲ್ಲ; ನಾವು ಯಾವುದನ್ನೋ ತ್ಯಜಿಸುತ್ತೇವೆಯೋ ಅದರೊಂದಿಗೆ ನಮಗೆ ನೇರವಾದ ಭಾವನಾತ್ಮಕ ಸಂಬಂಧ ಇರಬೇಕು. ಬಲಿದಾನದ ಹೆಸರಿನಲ್ಲಿ ಆಡು ಅಥವಾ ಕುರಿಯನ್ನು ಕೊಲ್ಲುವುದು ಕೇವಲ ಪ್ರಾಣಿ ಹಿಂಸೆ ಎಂದು ಹೇಳಿದ್ದಾರೆ.

ಇಂದಿನ ದಿನಗಳಲ್ಲಿ ನಾವು ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಸ್ತುತತೆಯನ್ನೇ ಕಳೆದುಕೊಂಡಿದ್ದೇವೆ. ಮತ್ತು ಧಾರ್ಮಿಕ ರೀತಿ,ರಿವಾಜು, ಕಟ್ಟುಕಟ್ಟಳೆ ಇತ್ಯಾದಿಗಳ ಹಿಂದಿನ ಮೂಲ ಅರ್ಥವನ್ನು ಮರೆತುಬಿಟ್ಟಿದ್ದೇವೆ ಎಂದು ಹೇಳಿದರು. ಇಸ್ಲಾಂನಲ್ಲಿರುವ ರಂಜಾನ್ ಉಪವಾಸ ವೃತದ ಬಗ್ಗೆಯೂ ಮಾತನಾಡಿದ ಅವರು, ರಂಜಾನ್  ಸಂದರ್ಭದಲ್ಲಿ ಉಪವಾಸ ಮಾಡುವುದಕ್ಕಿಂತ ಆತ್ಮಾವಲೋಕನ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.

ನಾವು ಮುಸ್ಲಿಮರು ಮೊಹರ್ರಂ ನ ಅಣಕು ಮಾಡುತ್ತಿದ್ದೇವೆ. ನಿಜಕ್ಕೂ ಮೊಹರ್ರಂ ಸಂದರ್ಭದಲ್ಲಿ ಮಾಡಬೇಕಿರುವುದು ಶೋಕಾಚರಣೆ. ಆದರೆ ನಾವು ಮಾಡುತ್ತಿರುವುದು ಧಾರ್ಮಿಕ ಮೆರವಣಿಗೆ ಎಂದು ಇರ್ಫಾನ್‌ ಹೇಳಿದರು.

SCROLL FOR NEXT