ಅಮೀರ್ ಖಾನ್ 
ಬಾಲಿವುಡ್

ವರಸೆ ಬದಲಿಸಿದ ಅಮೀರ್: ಭಾರತ ಸಹಿಷ್ಣು ದೇಶ ಎಂದ ಖಾನ್

ಭಾರತ ತುಂಬಾ ಸಹಿಷ್ಣು ದೇಶ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಅಸಹಹಿಷ್ಣುತೆ ಬೀಜ ಬಿತ್ತುತ್ತಿದ್ದಾರೆ. ಅಂಥವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಠಿಣ ...

ನವದೆಹಲಿ: ಭಾರತ ತುಂಬಾ ಸಹಿಷ್ಣು ದೇಶ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಅಸಹಹಿಷ್ಣುತೆ ಬೀಜ ಬಿತ್ತುತ್ತಿದ್ದಾರೆ. ಅಂಥವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಟ ಅಮೀರ್ ಖಾನ್ ಹೇಳಿದ್ದಾರೆ.

ಅಸಹಿಷ್ಣುತೆ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿ ಇನ್‌ಕ್ರೆಡಿಬಲ್ ಇಂಡಿಯಾದಿಂದ ಹೊರ ಬಿದ್ದಿರುವ ಬಾಲಿವುಡ್‌ ನಟ ಮಿಸ್ಟರ್‌ ಪರ್ಫೆಕ್ಟನಿಸ್ಟ್ ಅಮೀರ್ ಖಾನ್ ಮತ್ತೆ ತಮ್ಮ ಮಾತನ್ನು ಬದಲಾಯಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಿವುಡ್ ನಟ ಆಮಿರ್ ಖಾನ್ ಇದೀಗ ಭಾರತವು ಒಂದು ಸಹಿಷ್ಣು ದೇಶ. ಆದರೆ ಕೆಲವರು ದೇಶದಲ್ಲಿ ದ್ವೇಷ ಹಬ್ಬಿಸುತ್ತಿದ್ದು ಅಂತವರ ವಿರುದ್ಧ ಪ್ರಧಾನಿ ಮೋದಿಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.  ಅಲ್ಲದೇ ಮೋದಿ ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ ಅಮೀರ್.

ಅತಿಥಿ ದೇವೋಭವ ಪ್ರಚಾರ ರಾಯಭಾರಿಯಿಂದ ಕೇಂದ್ರ ಸರ್ಕಾರ ತನ್ನನ್ನು ಕೈಬಿಟ್ಟಿದ್ದರೂ, ತಾನು ಭಾರತದ ಪ್ರಚಾರ ರಾಯಭಾರಿಯಾಗಿ ಮುಂದುವರಿಯಲು ಇಚ್ಛಿಸುತ್ತೇನೆ ಎಂದಿದ್ದಾರೆ. ಭಾರತವು ಬ್ರಾಂಡ್ ಅಲ್ಲ. ಅದು ಯಾವಾಗಲೂ ನನ್ನ ತಾಯಿಯಿದ್ದಂತೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

ಎಂ.ಎಸ್. ಧೋನಿ ಸಿಎಸ್ ಕೆ ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ? 3,820 ಕೋಟಿ ರೂ ಮೊತ್ತದ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; ‘ಅನಿವಾರ್ಯ ಕಾರಣ’ ಎಂದ ವಿವಿ

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!