ಪ್ರೀತಿ ಝಿಂಟಾ ಮತ್ತು ಗುಡ್ ಇನಫ್ 
ಬಾಲಿವುಡ್

ಅಭಿಮಾನಿಗಳಿಗೆ ತನ್ನ ಪತಿಯನ್ನು ಪರಿಚಯಿಸಿದ ಪ್ರೀತಿ ಝಿಂಟಾ

ಲಾಸ್ ಏಂಜಲೀಸ್ ನ ಬೆವರ್ಲಿ ಹಿಲ್ಸ್ ನಲ್ಲಿ ರಹಸ್ಯ ಸಮಾರಂಭವೊಂದರಲ್ಲಿ ಕಳೆದ ವಾರ ಜೀನ್ ಗುಡ್ ಇನಫ್ ನನ್ನು...

ಲಾಸ್ ಏಂಜಲೀಸ್ ನ ಬೆವರ್ಲಿ ಹಿಲ್ಸ್ ನಲ್ಲಿ ರಹಸ್ಯ ಸಮಾರಂಭವೊಂದರಲ್ಲಿ ಕಳೆದ ವಾರ ಜೀನ್ ಗುಡ್ ಇನಫ್ ನನ್ನು ಮದುವೆಯಾಗಿದ್ದ ಪ್ರೀತಿ ಝಿಂಟಾ ಇದೀಗ ತನ್ನ ಮದುವೆ ಬಗ್ಗೆ ಮಾತನಾಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಮದುವೆಯನ್ನು ದೃಢಪಡಿಸಿರುವ ಪ್ರೀತಿ ಝಿಂಟಾ, ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಮುದ್ದಾದ ಸಂದೇಶವೊಂದನ್ನು ಕಳುಹಿಸಿದ್ದಾಳೆ.
ಸಂದೇಶದಲ್ಲಿ ಪ್ರೀತಿ, ಗುಡ್ ಇನಫ್ ನನ್ನು ಭೇಟಿಯಾಗುವವರೆಗೆ ತಾನು ತನ್ನ ಮಿಸ್ ಟ್ಯಾಗ್ ನ್ನು ಬಹಳ ಸಮಯಗಳವರೆಗೆ ಹಿಡಿದುಕೊಂಡಿದ್ದೆ. ಕಳೆದೊಂದು ವಾರದಿಂದ ಅನೇಕರು ತನಗೆ ಪ್ರೀತಿ ಮತ್ತು ಹಾರೈಕೆ ತೋರಿಸುತ್ತಿದ್ದು, ಅವರೆಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾಳೆ. ಅಲ್ಲದೆ ಆನ್ ಲೈನ್ ನಲ್ಲಿ ಹರಿದಾಡುತ್ತಿರುವ ಗುಡ್ ಇನಫ್  ಜೋಕ್ಸ್ ಗಳನ್ನು ಪ್ರೀತಿ ಝಿಂಟಾ ಅಷ್ಟೇ ಖುಷಿಯಾಗಿ ಸ್ವೀಕರಿಸಿದ್ದಾಳೆ. ಅಲ್ಲದೆ ತನ್ನ ಮತ್ತು ಜೀನ್ ನ ಫೋಟೋವನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಪ್ರೀತಿ ಝಿಂಟಾ ಕಳೆದ ವಾರ ಲಾಸ್ ಏಂಜಲೀಸ್ ನಲ್ಲಿ ತನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಬಾಯ್ ಫ್ರೆಂಡ್ ಹಣಕಾಸು ಸಲಹೆಗಾರ ಅಮೆರಿಕ ಮೂಲದ ಜೀನ್ ಗುಡ್ ಇನಫ್ ಜೊತೆ ಮದುವೆಯಾಗಿದ್ದಳು. ವರದಿಗಳ ಪ್ರಕಾರ ಇವರಿಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು.

 ಇವರಿಬ್ಬರೂ ಮುಂಬೈಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಜಪೂತ ಶೈಲಿಯಲ್ಲಿ ವಿವಾಹವಾಗಲಿದ್ದು, ಬಾಲಿವುಡ್ ನ ಸ್ನೇಹಿತರಿಗೆ ಪಾರ್ಟಿ ಆಯೋಜಿಸಲಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್, ಸುಸ್ಸಾನೆ ಖಾನ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರೀತಿ ಟ್ವಿಟ್ಟರ್ ನಲ್ಲಿ  ತನ್ನ ಮದುವೆಯ ಸುದ್ದಿಯನ್ನು ಘೋಷಣೆ ಮಾಡಿದ ಕೂಡಲೇ ಆಕೆಗೆ ಪ್ರಿಯಾಂಕಾ ಚೋಪ್ರಾ, ಅಭಿಷೇಕ್ ಬಚ್ಚನ್ ಮೊದಲಾದವರು ಶುಭಾಶಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!