ಮುಂಬಯಿ: ಅಪರೂಪದ ಕೃಷ್ಣ ಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಇಂದು ಜೋಧ್ ಪುರ್ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಬೆಳಗ್ಗೆ ತಮ್ಮ ಮನೆಯಿಂದ ಹೊರಟ ಸಲ್ಮಾನ್ ಖಾನ್ ಜೋಧ್ ಪುರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ತಮ್ಮ ವಿರುದ್ಧ ತಪ್ಪು ಆರೋಪ ಹೊರಿಸಿ ದೂರು ದಾಖಲಿಸಲಾಗಿದೆ ಎಂದು ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದಾರೆ. ಸಲ್ಮಾನ್ ಹೇಳಿಕೆ ನಂತರ ಏಪ್ರಿಲ್ 4 ಕ್ಕೆ ನ್ಯಾಯಾಲಯ ವಿಚಾರಣೆ ವಿಚಾರಣೆ ಮುಂದೂಡಿದೆ.
18 ವರ್ಷಗಳ ಹಮ್ ಸಾತ್ ಸಾತ್ ಹೈನ್ ಚಿತ್ರದ ಶೂಟಿಂಗ್ ವೇಳೆ ಕೃಷ್ಣಮೃಗ ಭೇಟೆಯಾಡಿದ್ದರು ಎಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಡಿ ದೂರು ದಾಖಲಾಗಿತ್ತು.