ಮುಂಬೈ: ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರು 17 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ತೆರೆ ಎಳೆದಿದ್ದಾರೆ. ಬಾಲಿವುಡ್ ನ ಈ ಜೋಡಿ ವಿಚ್ಛೇದನ ಪಡೆಯುತ್ತಾರೆ ಎಂಬ ಉಹಾಪೋಹಗಳಿಗೆ ಸೋಮವಾರ ಸ್ವತಃ ಮಲೈಕ ಹಾಗೂ ಅರ್ಬಾಜ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಮಲೈಕ ಹಾಗೂ ಅರ್ಬಾಜ್ ನಮ್ಮ ಖಾಸಗಿ ಬದುಕಿಗೆ ಕುತ್ತು ಬಂದಿದ್ದರಿಂದ ನಾವು ಪರಸ್ಪರ ಒಪ್ಪಿಗೆಯ ಮೇಲೆ ಬೇರ್ಪಡೆಯಾಗಿರುವುದು ನಿಜ. ನಾವು ಪ್ರತ್ಯೇಕವಾಗಿ ನಮ್ಮ ಬದುಕು ರೂಪಿಸುಕೊಳ್ಳುವ ಯತ್ನದಲ್ಲಿದ್ದೇವೆ. ಆದರೆ ನಮ್ಮ ಮೌನದ ಹಿನ್ನೆಲೆಯಲ್ಲಿ ಹರಡುತ್ತಿರುವ ವದಂತಿಗಳು ಕುಟುಂಬದ ವಾತಾವರಣವನ್ನು ಹದಗೆಡಿಸುತ್ತಿವೆ. ಹೀಗಾಗಿ ನಾವು ಈ ಜಂಟಿ ಹೇಳಿಕೆ ನೀಡುತ್ತಿದ್ದೇವೆ. ನಮ್ಮ ಪರವಾಗಿ ಯಾರೂ ಹೇಳಿಕೆ ನೀಡಬೇಕಾಗಿಲ್ಲ, ಮಾಧ್ಯಮ ಮಿತ್ರರೇ ನಮ್ಮನ್ನು ನಮ್ಮಷ್ಟಕ್ಕೆ ಇರಲು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ,
ಈ ಹಿಂದೆ ಅರ್ಬಾಜ್ ಸಹೋದರ ಸಲ್ಮಾನ್ ಕೂಡ ಇವರನ್ನು ರಾಜಿ ಮಾಡಿಸಲು ಹಲವು ಪ್ರಯತ್ನ ಮಾಡಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ.