ಬಾಲಿವುಡ್

ಲವ್ ಬ್ರೇಕ್ ಅಪ್ ಸುದ್ದಿ ಸುಳ್ಳು, ನಾವಿಬ್ಬರು ತುಂಬಾ ಪ್ರೀತಿಸುತ್ತೇವೆ: ಅಂಕಿತಾ ಲೋಖಾಂಡೆ

Shilpa D

ನವದೆಹಲಿ: ತಮ್ಮ ಆರು ವರ್ಷಗಳ ಲವ್ ಬ್ರೇಕ್ ಅಪ್ ಆಗಿದೆ ಎಂಬುದು ಸುಳ್ಳು, ನಾವಿಬ್ಬರೂ ಒಬ್ಬರೊನ್ನಬ್ಬರೂ ಅತಿಯಾಗಿ ಪ್ರೀತಿಸುತ್ತೇವೆ ಎಂದು ಕಿರುತೆರೆ ಕಲಾವಿದೆ ಅಂಕಿತಾ ಲೋಖಾಂಡೆ ಹೇಳಿದ್ದಾರೆ. ಆ ಮೂಲಕ ಲವ್ ಬ್ರೇಕ್ ಅಪ್  ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದೆಲ್ಲಾ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ನಮ್ಮ ಆರು ವರ್ಷದ ಪ್ರೀತಿ ಮುರಿದು ಬಿದ್ದಿದೆ ಎಂದು ಹೇಳುವವರ ದೃಷ್ಟಿ ಸರಿಯಿಲ್ಲ, ನನ್ನ ಕಾಲು ಮುರಿದಿದ್ದ ಕಾರಣ ಸುಶಾಂತ್ ರಜಪೂತ್ ಜೊತೆ  ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೋಳ್ಳಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಸುಶಾಂತ್ ನನ್ನು ಅತಿಯಾಗಿ ಪ್ರೀತಿಸುತ್ತೇನೆ, ಹೀಗಾಗಿ ಬೇರೆ ಕಲಾವಿದೆಯರು ಆತನೊಂದಿಗೆ ಸಲುಗೆ ಬೆಳೆಸುವುದು ನನಗೆ ಇಷ್ಟವಾಗುವುದಿಲ್ಲ. ಆ ವಿಷಯದಲ್ಲಿ ನಾನು ತುಂಬಾ ಪೊಸೆಸಿವ್ ಹುಡುಗಿ ಎಂದು ಹೇಳಿದ್ದಾರೆ.

SCROLL FOR NEXT