ಬಾಲಿವುಡ್

ಅನಂತ್ ಅಂಬಾನಿ ಜೊತೆಗಿನ ರೀಲ್‌ ವೈರಲ್; ಇನ್‌ಫ್ಲುಯೆನ್ಸರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ ನಟ ಶಾರುಖ್ ಖಾನ್!

ಅನಂತ್ ಅಂಬಾನಿ ಜೊತೆಗಿನ ರೀಲ್‌ ವೈರಲ್; ಇನ್‌ಫ್ಲುಯೆನ್ಸರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ ನಟ ಶಾರುಖ್ ಖಾನ್!
Photo | PTI
Published On :

ಕಂಟೆಂಟ್ ಕ್ರಿಯೇಟರ್ ಸುವಿಜ್ಞಾ ಶರ್ಮಾ ಅವರಿಗೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಆಧ್ಯಾತ್ಮಿಕ ನಾಯಕ ಸದ್ಗುರು ಅವರೊಂದಿಗಿನ ಸಂವಾದದ ವೇಳೆ ಉದ್ಯಮಿ ಅನಂತ್ ಅಂಬಾನಿ ಅವರೊಂದಿಗೆ ಶಾರುಖ್ ಖಾನ್ ನಡೆಸಿದ ಸಂಭಾಷಣೆಯನ್ನು, ಸುವಿಜ್ಞಾ ಶರ್ಮಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ರೀಲ್‌ನಲ್ಲಿ ಅವಹೇಳನಕಾರಿಯಾಗಿ ಮತ್ತು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ.

ನವೆಂಬರ್ 23ರಂದು ಹೊರಡಿಸಲಾದ ಈ ನೋಟಿಸ್‌ನಲ್ಲಿ, ಸದರಿ ಕಂಟೆಂಟ್ 'ದುರುದ್ದೇಶಪೂರಿತ, ದಾರಿತಪ್ಪಿಸುವ ಮತ್ತು ಅವಹೇಳನಕಾರಿ'ಯಾಗಿದೆ ಎಂದು ದೂರಲಾಗಿದೆ.

ಇನ್‌ಫ್ಲುಯೆನ್ಸರ್ ಒಬ್ಬರು ಹಂಚಿಕೊಂಡಿರುವ ರೀಲ್‌ನಲ್ಲಿ, ಸಂಭಾಷಣೆಯ ವೇಳೆ ಅನಂತ್ ಅವರು ನಟನಿಗೆ ಸುಮ್ಮನಿರುವಂತೆ ಹೇಳಿದರು ಎಂದು ಆರೋಪಿಸಲಾಗಿದೆ. ಈ ಆರೋಪಗಳನ್ನು 'ಆಧಾರರಹಿತ ಮತ್ತು ಸುಳ್ಳು' ಎಂದು ತಳ್ಳಿಹಾಕಿದ್ದು, ಮಾನನಷ್ಟಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 356 ಅನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ವ್ಯಕ್ತಿಯೊಬ್ಬರ ಕುರಿತು, ಸಾಕ್ಷ್ಯಾಧಾರಗಳಿಲ್ಲದೆ ಮಾನಹಾನಿಕರ ವಿಷಯವನ್ನು ಪ್ರಕಟಿಸಲು ಅಥವಾ ಹರಡಲು ಯಾರಿಗೂ ಅವಕಾಶವಿಲ್ಲ. ವಿವಾದಿತ ಇನ್‌ಸ್ಟಾಗ್ರಾಂ ರೀಲ್ ಅನ್ನು ತಕ್ಷಣವೇ ತೆಗೆದುಹಾಕುವಂತೆ, ಆ ಹೇಳಿಕೆಯನ್ನು ಮತ್ತಷ್ಟು ಹಂಚಿಕೊಳ್ಳುವುದರಿಂದ ಅಥವಾ ಪ್ರಸಾರ ಮಾಡುವುದರಿಂದ ದೂರವಿರಲು ಹಾಗೂ ವಿಡಿಯೋಗೆ ಸಂಬಂಧಿಸಿದ ಶೀರ್ಷಿಕೆಗಳು ಮತ್ತು ಹೇಳಿಕೆಗಳನ್ನು ಅಳಿಸಿಹಾಕಲು ಅಥವಾ ಸರಿಪಡಿಸಲು ಶರ್ಮಾ ಅವರಿಗೆ 48 ಗಂಟೆಗಳ ಗಡುವನ್ನು ನೀಡಲಾಗಿದೆ.

ಅಲ್ಲದೆ, ತಾವು ಕೈಗೊಂಡ ಕ್ರಮಗಳ ಕುರಿತು ಲಿಖಿತ ದೃಢೀಕರಣವನ್ನು ನೀಡುವಂತೆಯೂ ಆ ಇನ್‌ಫ್ಲುಯೆನ್ಸರ್‌ಗೆ ಸೂಚಿಸಲಾಗಿದೆ.

ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಮತ್ತೊಂದು 'ರೀಲ್' ವಿಡಿಯೋದಲ್ಲಿ ಶಾರುಖ್ ಖಾನ್ ಅವರಿಂದ ತಮಗೆ ಬಂದಿರುವ ಲೀಗಲ್ ನೋಟಿಸ್ ಬಗ್ಗೆ ಮಾಹಿತಿ ನೀಡಿರುವ ಶರ್ಮಾ, 'ಹಾಗಾದರೆ, ಶಾರುಖ್ ಖಾನ್‌ಗೆ 'ಬಾಯಿ ಮುಚ್ಚಿಕೊಂಡಿರುವಂತೆ' ಹೇಳಿದ ವ್ಯಕ್ತಿ ಅವರನ್ನು ಅವಮಾನಿಸಿದಂತಾಗಲಿಲ್ಲವೇ? ಅಥವಾ ತಮಗೆ ಅವಮಾನವಾಗಿದೆ ಎಂದು ಹೇಳುವ ಧೈರ್ಯ ಶಾರುಖ್ ಖಾನ್‌ಗೆ ಇಲ್ಲವೇ? ಆದರೆ, ಅವರ ಪ್ರಕಾರ ನಾವೇ ಅವರನ್ನು ಅವಮಾನಿಸಿದ್ದೇವಂತೆ!' ಎಂದಿದ್ದಾರೆ.

ತಮ್ಮನ್ನು ವಕೀಲ ಎಂದು ಹೇಳಿಕೊಳ್ಳುವ ಶರ್ಮಾ, ವೈರಲ್ ಆದ ವಿಡಿಯೋ ಬಗ್ಗೆ ಖಾನ್ ಏಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಪ್ರಶ್ನಿಸಿದರು. ಅಲ್ಲದೆ, ತಾವು ನೀಡಿದ ಹೇಳಿಕೆಗಳು 'ಅಭಿವ್ಯಕ್ತಿ ಸ್ವಾತಂತ್ರ್ಯ'ದ ಅಡಿಯಲ್ಲಿ ಬರುವ ಟೀಕೆಗಳಾಗಿವೆ ಎಂದು ಅವರು ಪ್ರತಿಪಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.