ಮುಂಬೈ: ನಾನು ಸಿನೆಮಾ ನಿರ್ದೇಶಿಸಿದರೆ ಅದರಲ್ಲಿ ನಟಿಸುವುದಿಲ್ಲ ಎಂದಿದ್ದಾರೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್.
ಎಂ ಎ ಎಂ ಐ ಫಿಲ್ಮ್ ಕ್ಲಬ್ ನ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ನಟನಾಗಿ ನೀವು ನಿರ್ದೇಶಕನನ್ನು ನಂಬಬೇಕಾಗುತ್ತದೆ. ಆದರೆ ನನ್ನ ಮೊದಲ ದಿನಗಳಲ್ಲಿ ನಾನು ಕೆಲಸ ಮಾಡಿದ ನಿರ್ದೇಶಕರ ಮನಸ್ಥಿತಿಯ ಜೊತೆಗೆ ಹೊಂದಾಣಿಕೆ ಕಷ್ಟವಾಗುತ್ತಿತ್ತು" ಎಂದಿದ್ದಾರೆ.
"ಆದುದರಿಂದ ಸಿನೆಮಾ ಚಿತ್ರೀಕರಣದ ವೇಳೆ ತೊಂದರೆ ಅನುಭವಿಸುತ್ತಿದ್ದೆ. ನಂತರ ನನ್ನ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವಾಗ ತುಸು ಎಚ್ಚರದಿಂದಿರುತ್ತೇನೆ. ನಾನೇ ಸಿನೆಮಾ ನಿರ್ದೇಶಿಸಿದರೆ ಅದರಲ್ಲಿ ನಟಿಸುವುದಿಲ್ಲ" ಎಂದು ಪಿ ಕೆ ನಟ ಹೇಳಿದ್ದಾರೆ.
ಸದ್ಯಕ್ಕೆ ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ 'ಧಂಗಲ್' ಸಿನೆಮಾದಲ್ಲಿ ನಟಿಸರುವ ಅಮೀರ್, ಕುಸ್ತಿಪಟು ಮಹಾವೀರ್ ಸಿಂಗ್ ಪೋಘಟ್ ಅವರ ಪಾತ್ರ ನಿರ್ವಹಿಸಿದ್ದಾರೆ.
ಈ ಸಿನೆಮಾ ಡಿಸೆಂಬರ್ ೨೩ ಕ್ಕೆ ಬಿಡುಗಡೆಯಾಗಲಿದೆ.