ಐಶ್ವರ್ಯಾ ರೈ 
ಬಾಲಿವುಡ್

ಬಾಕ್ಸ್ ಆಫೀಸ್ ಹಿಟ್ ಗಾಗಿ ನಾನು ಅಭಿನಯಿಸುವುದಿಲ್ಲ: ಐಶ್ವರ್ಯಾ ರೈ

ನನ್ನ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಬೇಕೆಂದು ಬಯಸಿ ನಾನು ಯಾವತ್ತೂ ಸಿನಿಮಾ ಮಾಡುವುದಿಲ್ಲ ಎಂದು...

ಮುಂಬಯಿ: ನನ್ನ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಬೇಕೆಂದು ಬಯಸಿ ನಾನು ಯಾವತ್ತೂ ಸಿನಿಮಾ ಮಾಡುವುದಿಲ್ಲ ಎಂದು ನಟಿ ಐಶ್ವರ್ಯ ರೈ ಹೇಳಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಹಿಟ್ ಕುರಿತು ಯೋಚನೆ ಮಾಡಿ ನಟಿಸುವುದಿಲ್ಲ, ಅದನ್ನು ನಾನು ಎಂದಿಗೂ ನಿರೀಕ್ಷೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಅಭಿಮಾನಿಗಳು ಪ್ರೋತ್ಸಾಹವೇ ಸಾಕು ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ದೇಶಾದ್ಯಂತ ತೆರಿಗೆ ಇಲ್ಲದೇ ಬಿಡುಗಡೆ ಮಾಡಲಾಗುತ್ತಿದೆ. ಇದೊಂದು ಸೂಕ್ಷ್ಮ ಕಥಾ ಹಂದರವುಳ್ಳ ಚಿತ್ರವಾಗಿದ್ದು ಪ್ರೇಕ್ಷಕನಿಗೆ ಇಷ್ಟವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್, ರಣದೀಪ್ ಹೂಡಾ ಹಾಗೂ ರಿಚಾ ಚಡ್ಡಾ  ಅಭಿನಯ ಅವೋಘವಾಗಿ ಮೂಡಿ ಬಂದಿದ್ದು  ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗ್ತಿದೆ.
 
ಚಿತ್ರದ ಪ್ರಮುಖ ಪಾತ್ರದಲ್ಲಿ ಐಶ್ವರ್ಯ ರೈ ಹಾಗೂ ರಣದೀಪ್ ಅಭಿನಯಿಸಿದ್ದಾರೆ. ಇನ್ನೂ ಚಿತ್ರದಲ್ಲಿ ಸರಬ್ಜಿತ್ ಸಹೋದರಿ ಪಾತ್ರ ಮಾಡಿರುವ ಐಶ್ವರ್ಯ ರೈ ಅವರ ನಟನೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

SCROLL FOR NEXT