ಬಾಲಿವುಡ್

ದೀಪಿಕಾ ಮದುವೆಯಾಗಲು ಬಯಸುತ್ತೇನೆ ಎಂದ ರಣವೀರ್ ಸಿಂಗ್ ಹೇಳಿಕೆಗೆ ಪ್ರಕಾಶ್ ಪಡುಕೋಣೆ ಪ್ರತಿಕ್ರಿಯೆ

Sumana Upadhyaya
ಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ಸೀಸನ್ 5 ಈಗಾಗಲೇ ಆರಂಭವಾಗಿದೆ. ಮೊದಲ ಎಪಿಸೋಡ್ ನಲ್ಲಿ ಶಾರೂಕ್ ಖಾನ್ ಮತ್ತು ಆಲಿಯಾ ಭಟ್ ಕಾಣಿಸಿಕೊಂಡಿದ್ದರು. ನಂತರ ಬಂದ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಕೆಲವು ಉಲ್ಲಾಸಕರ ಹೇಳಿಕೆಗಳನ್ನು ನೀಡಿದ್ದರು. ಅವೆಲ್ಲಕ್ಕಿಂತಲೂ ಹೆಚ್ಚಾಗಿ ವೀಕ್ಷಕರ ಗಮನ ಸೆಳೆದದ್ದು ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಅವರು ಮಾತನಾಡಿದ ಎಪಿಸೋಡ್.
ಬಾಲಿವುಡ್ ನ ಹಾರ್ಟ್ ಥ್ರೋಬ್ ಗಳಾದ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಇಬ್ಬರೂ ತಮ್ಮ ಧೈರ್ಯದ ನಾಚಿಗೆಬಿಟ್ಟು ನೀಡುವ ಕಮೆಂಟ್ ಗಳು ಮತ್ತು ಹೇಳಿಕೆಗಳಿಗೆ ಹೆಸರಾದವರು. ಇವರಿಬ್ಬರು ಭಾಗವಹಿಸಿದ ಶೋ ಚಾನೆಲ್ ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಸಾಕಷ್ಟು ಸುದ್ದಿಯಾಗಿತ್ತು.
ಸಂದರ್ಶನದಲ್ಲಿ ಕರಣ್ ರ್ಯಾಪಿಡ್ ಫೈರ್ ಸುತ್ತಿನಲ್ಲಿ,ರಣವೀರ್ ಸಿಂಗ್ ಬಳಿ ದೀಪಿಕಾ, ಕತ್ರಿನಾ ಮತ್ತು ಅನುಷ್ಕಾ ಇವರು ಮೂವರಲ್ಲಿ ಯಾರನ್ನು ಮದುವೆಯಾಗಲು, ಯಾರ ಜೊತೆ ಸಂಬಂಧ ಬೆಳೆಸಲು ಮತ್ತು ಯಾರನ್ನು ಸಾಯಿಸಲು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ ಸಹಜವಾದ ಉತ್ತರ ಬಂತು. ನಾನು ದೀಪಿಕಾಳನ್ನು ಮದುವೆಯಾಗಲು ಇಚ್ಚಿಸುತ್ತೇನೆ, ಏಕೆಂದರೆ ಆಕೆ ಮದುವೆಯ ವಸ್ತು ಎಂದು ಹೇಳಿದ್ದರು.
ಇದಕ್ಕೆ ದೀಪಿಕಾ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಆಕೆಯ ತಂದೆ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದಾರೆ. ''ಅವರು ವಯಸ್ಕರು,ತಾವೇನು ಮಾಡುತ್ತಿದ್ದೇವೆ ಎಂದು ಅವರಿಗೆ ಗೊತ್ತಿದೆ. ತಂದೆಯಾಗಿ ನಾನು ದೀಪಿಕಾಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಈ ವಿಷಯದಲ್ಲಿ ಕೂಡ ಆಕೆಗೆ ಏನು ಇಷ್ಟವೋ ಹಾಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವಳಿಗಿದೆ'' ಎಂದು ಹೇಳಿದ್ದಾರೆ ಎಂದು ಮಿಡ್-ಡೇ ಪತ್ರಿಕೆ ವರದಿ ಮಾಡಿದೆ. 
SCROLL FOR NEXT