ನಟ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ (ಸಂಗ್ರಹ ಚಿತ್ರ) 
ಬಾಲಿವುಡ್

ಒಟ್ಟಿಗೆ ಕರ್ವ ಚೌತ್ ಆಚರಣೆ; ಮತ್ತೆ ಒಂದಾದ ಅರ್ಬಾಜ್-ಮಲೈಕಾ?

ಇತ್ತೀಚೆಗಷ್ಟೇ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹಬ್ಬಿದೆ.

ಮುಂಬೈ: ಇತ್ತೀಚೆಗಷ್ಟೇ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹಬ್ಬಿದೆ.

ಬಾಲಿವುಡ್ ಹಾಟ್ ಜೋಡಿಗಳಲ್ಲಿ ಒಂದಾದ ಅರ್ಬಾಜ್ ಖಾನ್ ಹಾಗೂ ಮಲೈಕಾ ಜೋಡಿ ಒಂದಾಗುತ್ತಿದೆಯೇ..ಹೌದು ಎನ್ನುತ್ತಿದೆ ಬಿ-ಟೌನ್. ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ  ಗ್ರಾಸವಾಗಿದ್ದ ಈ ಜೋಡಿ ಇದೀಗ ಸಕಾರಾತ್ಮಕ ಕಾರಣಗಳಿಂದಾಗಿ ಮತ್ತೆ ಸುದ್ದಿ ಮಾಡುತ್ತಿದ್ದು, ಅರ್ಬಾಜ್ ಹಾಗೂ ಮಲೈಕಾ ಒಂದಾಗುತ್ತಿದ್ದಾರಂತೆ. ವಿಚ್ಚೇದನ ಪಡೆಯದಂತೆ ಕುಟುಂಬಸ್ಥರು  ಇವರಿಬ್ಬರ ಮನವೊಲಿಸಿದ್ದು, ಇದೀಗ ಈ ಜೋಡಿ ಮತ್ತೆ ಒಂದಾಗುವ ಕುರಿತು ನಿರ್ಧಾರ ಕೈಗೊಂಡಿದ್ದಾರಂತೆ.

ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಈ ಜೋಡಿ ಒಟ್ಟೊಟ್ಟಿಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆ ಕರ್ವ ಚೌತ್ ನಲ್ಲಿಯೂ ಕೂಡ ಒಟ್ಟಿಗೆ ಹಬ್ಬದ ಆಚರಣೆ ಮಾಡಿದೆ  ಎಂದು ಹೇಳಲಾಗುತ್ತಿದೆ. ಅಂತೆಯೇ ಪರಸ್ಪರ ವಿರಸದ ಬಳಿಕ ಅರ್ಬಾಜ್ ಖಾನ್ ಮನೆಯಿಂದ ಹೊರ ಹೋಗಿದ್ದ ಮಲೈಕಾ ಮತ್ತೆ ತಮ್ಮ ಮಗನೊಂದಿಗೆ ಮನೆಗೆ ವಾಪಸ್ ಆಗಲು  ನಿರ್ಧರಿಸಿದ್ದಾರಂತೆ.

ಇಷ್ಟಕ್ಕೂ ಈ ಜೋಡಿ ಮತ್ತೆ ಒಂದಾಗಲು ಅವರ ಕುಟುಂಬಸ್ಥರೇ ಕಾರಣ ಎಂದೂ ಸುದ್ದಿಗಳು ಹರಿದಾಡುತ್ತಿವೆ. ಮಲೈಕಾ ಸಹೋದರಿ ಅಮೃತಾ ಅರೋರಾ ಅವರು ಮಲೈಕಾರನ್ನು ಸಮಾಧಾನ  ಪಡಿಸಿದ್ದರೆ, ಅರ್ಬಾಜ್ ಖಾನ್ ರನ್ನು ಸಹೋದರ ಸಲ್ಮಾನ್ ಖಾನ್ ಸಂತೈಸಿದ್ದಾರಂತೆ. ಅಲ್ಲದೆ ನಟ ಸಲ್ಮಾನ್ ಖಾನ್ ಮಲೈಕಾರೊಂದಿಗೂ ಮಾತುಕತೆ ನಡೆಸಿದ್ದು, ಬೇರೆ-ಬೇರೆಯಾಗದಂತೆ  ಕಿವಿಮಾತು ಹೇಳಿದ್ದಾರೆ. ಸಲ್ಮಾನ್ ಖಾನ್ ಮಾತಿಗೆ ಬೆಲೆ ನೀಡಿರುವ ಮಲೈಕಾ ಮತ್ತೆ ಅರ್ಬಾಜ್ ಖಾನ್ ರನ್ನು ಸೇರಲು ನಿರ್ಧರಿಸಿದ್ದಾರಂತೆ.

ಒಟ್ಟಾರೆ ಖಾನ್ ಕುಟುಂಬದ ವಿಚ್ಚೇದನ ಪ್ರಹಸನ ಸುಖಾಂತ್ಯ ಕಾಣುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!