18ನೇ ಮುಂಬೈ ಚಲನಚಿತ್ರೋತ್ಸವದ ಭಾಗವಾಗಿರುವ ಮಾಮಿ ಮೂವಿ ಮೇಳದಲ್ಲಿ ಐಶ್ವರ್ಯಾ ರೈ, ಕರಣ್ ಜೋಹರ್ ಮತ್ತು ಅನುಷ್ಕಾ ಶರ್ಮ. 
ಬಾಲಿವುಡ್

ಯೆ ದಿಲ್ ಹೆ ಮುಷ್ಕಿಲ್ ನಲ್ಲಿ ದೇಹ ಪ್ರದರ್ಶನ ಅಥವಾ ಲಿಪ್ ಲಾಕ್ ಇಲ್ಲ: ಐಶ್ವರ್ಯಾ ರೈ

ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ಯೆ ದಿಲ್ ಹೆ ಮುಷ್ಕಿಲ್ ನಲ್ಲಿ ರಣಬೀರ್ ಕಪೂರ್ ಮತ್ತು ಐಶ್ವರ್ಯಾ ರೈಯವರ...

ಮುಂಬೈ: ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ಯೆ ದಿಲ್ ಹೆ ಮುಷ್ಕಿಲ್ ನಲ್ಲಿ ರಣಬೀರ್ ಕಪೂರ್ ಮತ್ತು ಐಶ್ವರ್ಯಾ ರೈಯವರ ಕೆಮಿಸ್ಟ್ರಿ ಬಗ್ಗೆ ಅನೇಕ ದಿನಗಳಿಂದ ಸುದ್ದಿ ಕೇಳಿಬರುತ್ತಿದೆ. ಐಶ್ವರ್ಯಾ ರೈ ಹೇಳುವ ಪ್ರಕಾರ ಚಿತ್ರದಲ್ಲಿ .ಯಾವುದೇ ನಿಷ್ಪ್ರಯೋಜಕ ರೊಮ್ಯಾಂಟಿಕ್ ದೃಶ್ಯಗಳಿಲ್ಲ.
ತಮ್ಮ ಪಾತ್ರದ ಬಗ್ಗೆ ವಿವರಿಸುವ ಐಶ್ವರ್ಯಾ, ಚಿತ್ರದಲ್ಲಿ ಸಾಬಾ ಖಾನ್ ಅನ್ನುವ ಪಾತ್ರವನ್ನು ತುಂಬಾ ಕ್ಲಾಸಿಯಾಗಿ, ಗಂಭೀರವಾಗಿ, ಗೌರವಯುತವಾಗಿ ಬಿಂಬಿಸಲಾಗಿದೆ. ಆಕೆ ಆಯಾನ್ (ರಣಬೀರ್ ಕಪೂರ್) ಜೀವನದಲ್ಲಿ ತುಂಬಾ ಪ್ರಭಾವ ಬೀರುತ್ತಾಳೆ.
''ಪಾತ್ರದಲ್ಲಿ ಸಾಬಾ ಖಾನ್ ನ ಮನೋಧರ್ಮ ಆಕೆಯನ್ನು ಆಕರ್ಷಕವಾಗಿಸಿದೆ. ನಮಗೆ ದೇಹ ಪ್ರದರ್ಶಿಸುವ, ಲಿಪ್ ಲಾಕ್ ಮಾಡುವ ಅಥವಾ ಪ್ರಚೋದನೆ ನೀಡುವ ದೃಶ್ಯಗಳನ್ನು ಮಾಡುವ ಉದ್ದೇಶವಿರಲಿಲ್ಲ. ಇದು ಸಾಬಾ ಮತ್ತು ಆಯಾನ್ ನಡುವಿನ ಸಂಬಂಧವನ್ನು ಹೇಳುತ್ತದೆ.
ಇದೇ ಮೊದಲ ಬಾರಿಗೆ ಕರಣ್ ಜೋಹರ್ ಸಿನಿಮಾದಲ್ಲಿ ಐಶ್ವರ್ಯಾ ಅಭಿನಯಿಸಿದ್ದು ತಮ್ಮ ಅನುಭವವನ್ನು ಹಂಚಿಕೊಂಡರು. ನನಗೆ ಸಾಬಾ ಪಾತ್ರ ನಿರ್ವಹಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದರು.
ಚಿತ್ರದಲ್ಲಿ ಮತ್ತೊಬ್ಬ ನಾಯಕಿ ಅನುಷ್ಕಾ ಶರ್ಮ ಕೂಡ ಇದ್ದು ಇಬ್ಬರ ನಡುವೆ ಏನಾದರೂ ಭಿನ್ನತೆ, ಮನಸ್ತಾಪ ಉಂಟಾಗಿದೆಯೇ ಎಂದು ಕೇಳಿದಾಗ, ನಾವು ತುಂಬಾ ದೃಶ್ಯಗಳಲ್ಲಿ ಒಟ್ಟಿಗೆ ಬಂದಿಲ್ಲ. ಆದರೆ ಒಂದು ತುಂಬಾ ಮುಖ್ಯ ದೃಶ್ಯದಲ್ಲಿ ನಾವು ಮೂವರೂ ಒಟ್ಟಾಗಿ ಅಭಿನಯಿಸಿದ್ದೇವೆ. ನಮ್ಮಲ್ಲಿ ಯಾವುದೇ ಸಮಸ್ಯೆ, ಅಸುರಕ್ಷತೆ ಬರಲು ಹೇಗೆ ಸಾಧ್ಯ? ನಾವು ಚೆನ್ನಾಗಿಯೇ ಇದ್ದೆವು ಎಂದಾಗ ಅನುಷ್ಕಾ ನಕ್ಕರು.
18ನೇ ಮುಂಬೈ ಚಲನಚಿತ್ರೋತ್ಸವದ ಭಾಗವಾಗಿರುವ ಜಿಯೊ ಮಾಮಿ ಮೂವಿ ಮೇಳದಲ್ಲಿ ಐಶ್ವರ್ಯಾ ರೈ, ಕರಣ್ ಜೋಹರ್ ಮತ್ತು ಅನುಷ್ಕಾ ಶರ್ಮ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ