ನವದೆಹಲಿ: ಬಾಲಿವುಡ್ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಮುಂಬಯಿಯಲ್ಲಿರುವ ಅಮೆರಿಕಾ ರಾಯಭಾರ ಕಚೇರಿ ಹರ್ಷ ವ್ಯಕ್ತ ಪಡಿಸಿದೆ.
30 ವರ್ಷದ ದೀಪಿಕಾ ಮುಂಬಯಿಯಲ್ಲಿರುವ ಅಮೆರಿಕಾ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಲ್ವಾರ್ ಕಮೀಜ್ ತೊಟ್ಟಿದ್ದರು, ಜೊತೆಗೆ ಕಣ್ಣಿಗೆ ಒಂದು ಕಪ್ಪು ಕನ್ನಡಕ ಧರಿಸಿದ್ದರು. ಅವರನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಹಾಲಿವುಡ್ ನ ಅವರ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಕೋರಿದ್ದಾರೆ.
ದೀಪಿಕಾ ಅವರನ್ನು ಭೇಟಿ ಮಾಡಿದ್ದು ನನಗೆ ತುಂಬಾ ಆನಂದ ತಂದಿದೆ ಎಂದು ಅವರು ದೀಪಿಕಾ ಪಡುಕೋಣೆ ಅವರನ್ನು ಹೊಗಳಿದ್ದಾರೆ.