ಕ್ರಿಶ್-3 ರ ಭಿತ್ತಿಚಿತ್ರ 
ಬಾಲಿವುಡ್

ಕ್ರಿಶ್-4 ಘೋಷಣೆ ಮಾಡಿದ ರಾಕೇಶ್ ರೋಷನ್

ಜನಪ್ರಿಯ ಸೈನ್ಸ್-ಫಿಕ್ಷನ್ ಚಲನಚಿತ್ರ ಕ್ರಿಶ್ ನ ನಾಲ್ಕನೇ ಆವೃತ್ತಿಯನ್ನು ರಾಕೇಶ್ ರೋಷನ್ ಅವರು ಘೋಷಿಸಿದ್ದು, ಇದರಲ್ಲಿಯೂ ಮುಖವಾಡ ಧರಿಸಿದ ನಾಯಕನ ಪಾತ್ರವನ್ನು ಅವರ ಪುತ್ರ ಹೃತಿಕ್ ರೋಷನ್

ಮುಂಬೈ: ಜನಪ್ರಿಯ ಸೈನ್ಸ್-ಫಿಕ್ಷನ್ ಚಲನಚಿತ್ರ ಕ್ರಿಶ್ ನ ನಾಲ್ಕನೇ ಆವೃತ್ತಿಯನ್ನು ರಾಕೇಶ್ ರೋಷನ್ ಅವರು ಘೋಷಿಸಿದ್ದು, ಇದರಲ್ಲಿಯೂ ಮುಖವಾಡ ಧರಿಸಿದ ನಾಯಕನ ಪಾತ್ರವನ್ನು ಅವರ ಪುತ್ರ ಹೃತಿಕ್ ರೋಷನ್ ನಿರ್ವಹಿಸಲಿದ್ದಾರೆ. 
"ಕ್ರಿಶ್ ಆಗಿರುವ ಬಪ್ಪಾನ ಚಿತ್ರದ ಟ್ವೀಟ್ ಅನ್ನು ನನ್ನ ಪತ್ನಿ ತೋರಿಸಿದರು. ಆಗ ನನಗೆ ಮತ್ತೆ ಧೃಢವಾಯಿತು, ನಮ್ಮಲ್ಲಿರುವ ಒಂದೇ ಮೂಲದ ಸೂಪರ್ ಹೀರೊ ಇದು ಎಂದು. ಇದು ನನ್ನ ಆತ್ಮವಿಶ್ವಾಸ ಹೆಚ್ಚಿಸಿ ನಾಲ್ಕನೇ ಭಾಗ ಮಾಡಬೇಕೆಂದು ನಿಶ್ಚಯಿಸಿದೆ" ಎಂದು ರಾಕೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಈ ಸೂಪರ್ ಹೀರೊ ಚಲನಚಿತ್ರದಲ್ಲಿ ನಾಯಕನಟನಾಗಿರುವ ಹೃತಿಕ್, ಕ್ರಿಶ್ ವೇಷ ತೊಟ್ಟ ಗಣೇಶನ ಫೋಟೋವನ್ನು ಮಂಗಳವಾರ ಹಂಚಿಕೊಂಡಿದ್ದಾರೆ. 
"ಗಣಪತಿ ಕ್ರಿಶ್ 4 ಕ್ಕೆ ಆಶೀರ್ವಾದ ಮಾಡುತ್ತಿದ್ದಾನೆ" ಎಂದು ಇದಕ್ಕೆ ಶೀರ್ಷಿಕೆ ನೀಡಿರುವ ಹೃತಿಕ್ "ಎಲ್ಲರೂ ಹಬ್ಬಗಳನ್ನು ಸಂಭ್ರಮಿಸುತ್ತಿದ್ದೀರಿ ಎಂಬ ನಂಬಿಕೆ ಇದೆ. ಎಲ್ಲರಿಗು ಪ್ರೀತಿ" ಎಂದಿದ್ದಾರೆ. 
ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಲಿದ್ದು, 2018 ರ ಕ್ರಿಸ್ಮಸ್ ಗೆ ಸಿನೆಮಾ ಬಿಡುಗಡೆಯಾಗಲಿದೆ. 
ಸಂಜಯ್ ಗುಪ್ತಾ ನಿರ್ದೇಶನದ ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ನಟಿಸಿರುವ 'ಕಾಬಿಲ್' 2017 ಜನವರಿ 26 ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT