ನವದೆಹಲಿ: ಸಿನಿಮಾ, ಗ್ಲಾಮರ್ ಜಗತ್ತು, ಫ್ಯಾಶನ್ ಇವುಗಳ ಮಧ್ಯೆ ಇದ್ದರೂ ಕೂಡ ತಾನು ಪಾರ್ಟಿಗಳಿಗೆ ಹೋಗುವುದಿಲ್ಲ ಮತ್ತು ಆಲ್ಕೋಹಾಲ್ ನ್ನು ಮುಟ್ಟುವುದಿಲ್ಲ ಎಂದಿದ್ದಾರೆ ಬಾಲಿವುಡ್ ನ ಫ್ಯಾಶನ್ ದಿವಾ ಸೋನಮ್ ಕಪೂರ್.
ಹಫಿಂಗ್ ಟನ್ ಪೋಸ್ಟ್ ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, ವಿವಾದರಹಿತ ಜೀವನ ನಡೆಸಲು, ನಾನು ಎಂದಿಗೂ ಸಿನಿಮೋದ್ಯಮದಲ್ಲಿ ಇರುವವರ ಜೊತೆ ಸುತ್ತಾಟ ನಡೆಸಿಲ್ಲ. ಯಾರ ಜೊತೆಯೂ ಇದುವರೆಗೆ ವೃಥಾ ಸಂಬಂಧ ಹೊಂದಿಲ್ಲ ಮತ್ತು ಪಾರ್ಟಿಗಳಿಗೆ ಹೋಗುವುದು, ಡ್ರಿಂಕ್ಸ್ ಮಾಡುವುದು ಇತ್ಯಾದಿ ಅಭ್ಯಾಸಗಳನ್ನಿಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ.
''ನಾನು ಕುಡಿಯುವುದಿಲ್ಲ, ದಿನ ಬಿಟ್ಟು ದಿನ ರಾತ್ರಿ 10 ಗಂಟೆಗೆ ಬೆಡ್ ಮೇಲೆ ಒಂದು ಪುಸ್ತಕ ಹಿಡಿದುಕೊಂಡು ಓದಲು ಕುಳಿತುಕೊಳ್ಳುತ್ತೇನೆ'' ಎನ್ನುತ್ತಾರೆ.
ವಿವಾದ ಮುಕ್ತ ವೃತ್ತಿಜೀವನ, ತನ್ನ ಅಂಗರಕ್ಷಕ ಮತ್ತು ಪ್ರಚಾರಕರ ಬಗ್ಗೆ ಪ್ರತಿಕ್ರಿಯಿಸಿದ ಸೋನಮ್, ಅವರಿಲ್ಲದೆ ನನ್ನ ಜೀವನವನ್ನು ನೆನೆಸಿಕೊಳ್ಳಲು ಸಾಧ್ಯವೇ ಇಲ್ಲ. ನಟಿಯಾಗಿ ವೃತ್ತಿ ಜೀವನ ಆರಂಭಿಸಿದಾಗಿನಿಂದ ನನ್ನ ಜೊತೆಗೆ ಅವರಿದ್ದಾರೆ. ಅವರಿಗೆ ಎಲ್ಲಾ ಗೊತ್ತಿದೆ. ನಿಯಂತ್ರಣದಲ್ಲಿ ಇಡುವುದು ಹೇಗೆ ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ, ಯಾಕೆಂದರೆ ನನ್ನ ಖಾಸಗಿ ಜೀವನದ ಬಗ್ಗೆ ಬಹಳ ಅಪರೂಪವಾಗಿ ಪತ್ರಿಕೆಗಳಲ್ಲಿ ಬರುತ್ತವೆ.
ಪ್ರಾಜೆಕ್ಟ್ ವಿಷಯದಲ್ಲಿ ನೀರ್ಜಾ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಆ ಬಳಿಕ ತಮ್ಮ ಹೋಂ ಪ್ರೊಡಕ್ಷನ್ ನಲ್ಲಿ ವೀರೆ ದಿ ವೆಡ್ಡಿಂಗ್ ಚಿತ್ರದ ಕೆಲಸ ಆರಂಭಗೊಂಡಿದೆ. ಇದರಲ್ಲಿ ಕರೀನಾ ಕಪೂರ್ ಮತ್ತು ಸ್ವರ ಭಾಸ್ಕರ್ ಅವರು ಕೂಡ ನಟಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos