ಲಾಸ್ ಏಂಜಲೀಸ್: ಅಮೆರಿಕದ ಕ್ವಾಂಟಿಕೋ ಸೀರಿಯಲ್ ಮೂಲಕ ಹಾಲಿವುಡ್‌ನಲ್ಲಿ ಅವಕಾಶಗಳನ್ನು ಹೆಚ್ಚಿಕೊಂಡಿರುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಬೇವಾಚ್ ಚಿತ್ರದಲ್ಲಿ ನಟಿಸಿದ್ದಾರೆ.
ಕ್ವಾಂಟಿಕೋ ಶೋದ ಯಶಸ್ಸಿನ ನಂತರ ಪ್ರಿಯಾಂಕ ಛೋಪ್ರಾ ಅವರಿಗೆ ಹಾಲಿವುಡ್ ನಿಂದ ಅನೇಕ ಆಫರ್ ಗಳು ಬಂದಿವೆ.
ಪ್ರಿಯಾಂಕ ತಾವು ಇದುವೆರೆಗೂ ಕಾಣಿಸಿಕೊಳ್ಳದ ಅವತಾರದಲ್ಲಿ ಬೇ ವಾಚ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ರೆ ಪಿಗ್ಗಿ ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದು, ಈ ಚಿತ್ರ ನೋಡಿದ ನಂತರ ಅಮೆರಿಕಾ ನನ್ನನ್ನು ದ್ವೇಷಿಸಬಹುದು ಎಂದು ಹೇಳಿದ್ದಾರೆ.
ಬೇ ವಾಚ್ ಸಿನಿಮಾದಲ್ಲಿ ಹಾಲಿವುಡ್ ದಿಗ್ಗಜ ನಟ ಡ್ವೇನ್ ಜಾನ್‌ಸನ್ ಹಾಗೂ ಜಾಕ್ ಎಫರಾನ್ ನಟಿಸಿದ್ದಾರೆ. ಇನ್ನು ಕ್ವಾಂಟಿಕೋದ ಮುಂದಿನ ಎಪಿಸೋಡ್ ಹೇಗಿರುತ್ತೆ ಎಂಬ ಕೂತೂಹಲ ಪ್ರೇಕ್ಷಕರಲ್ಲಿದೆ. ಕೆಲವು ದಿನಗಳ ಹಿಂದೆ ಕ್ವಾಂಟಿಕೋದ ಮೊದಲನೇ ಎಪಿಸೋಡ್ ನಾನು ನೋಡಿದ್ದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.