ಬಾಲಿವುಡ್

ದೆಹಲಿ ಶಿಕ್ಷಕಿಗೆ ಇರಿತ: ಸಮಾಜ ಬದಲಾಗಬೇಕಿದೆ ಎಂದ ಬಿಗ್ ಬಿ

Guruprasad Narayana
ಕೋಲ್ಕತ್ತಾ: 21 ವರ್ಷದ ನವದೆಹಲಿಯ ಶಿಕ್ಷಕಿಯನ್ನು ಇರಿದು ಕೊಂದ ಪ್ರಕರಣವನ್ನು 'ಭಯಾನಕ' ಎಂದಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಸಮಾಜ ಒಳ್ಳೆಯ ರೀತಿಯಲ್ಲಿ ಬದಲಾಗಬೇಕು ಎಂದು ಬುಧವಾರ ಹೇಳಿದ್ದಾರೆ. 
"ನಾನು ಆ ವಿಡಿಯೋ ನೋಡಿದ್ದೇನೆ... ಇದು ಕೆಟ್ಟ ಘಟನೆ. ಸಮಾಜ ಬದಲಾಗಬೇಕಿದೆ. ನಾವು ಪ್ರಯತ್ನ ಮುಂದುವರೆಸಬೇಕು. ಎಲ್ಲರು 'ಇದು ನನ್ನ ಕೆಲಸವಲ್ಲ ಮತ್ತು ನನಗೆ ಇದರಲ್ಲಿ ಆಸಕ್ತಿಯಿಲ್ಲ' ಎಂದು ಕೈಚೆಲ್ಲುತ್ತಾರೆ" ಎಂದು ಬಿಗ್ ಬಿ ಗಮನಿಸಿದ್ದಾರೆ.
"ಸಾಕಷ್ಟು ಜನ ಮತ್ತೊಬ್ಬರಿಗೆ ಸಹಾಯ ಮಾಡಲು ಹೆದರುತ್ತಾರೆ ಏಕೆಂದರೆ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತನಾಗುವ ಭಯಕ್ಕೆ. ಆದುದರಿಂದ ಅವರು ತೊಡಗಿಸಿಕೊಳ್ಳುವುದಿಲ್ಲ" ಎಂದು ಬಚ್ಚನ್ ತಮ್ಮ ಸಿನೆಮಾ 'ಪಿಂಕ್' ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. 
ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ಕರುಣಾ ಎಂಬ ನಾವೆಲ್ ರೀಚಸ್ ಶಾಲೆಯ ಶಿಕ್ಷಕಿಯನ್ನು 22 ಬಾರಿ ಇರಿದು ಅವನ ಭಗ್ನ ಪ್ರೇಮಿ ಕೊಲೆ ಮಾಡಿದ್ದ. 
ಸಮಾಜ ನಿಧಾನವಾಗಿ ಬದಲಾಗುತ್ತಿದ್ದು, ಕಾನೂನು ಕೂಡ ಒಳ್ಳೆಯ ರೀತಿಯಲ್ಲಿ ಬದಲಾಗುತ್ತಿದೆ ಎಂದು ಅಮಿತಾಬ್ ಗುರುತಿಸಿದ್ದಾರೆ. 
"ಆದರೆ ಇವೆಲ್ಲವೂ ಬದಲಾಗುತ್ತಿವೆ. ಕಾನೂನು ಕೂಡ ಬದಲಾಗುತ್ತಿದೆ" ಎಂದು ಅಮಿತಾಬ್ ಹೇಳಿದ್ದಾರೆ.  
SCROLL FOR NEXT